Mysore
23
overcast clouds

Social Media

ಮಂಗಳವಾರ, 13 ಅಕ್ಟೋಬರ್ 2026
Light
Dark

ಬೆಂಗಳೂರು ಕರಗ ಮಹೋತ್ಸವಕ್ಕೆ ಮುಹೂರ್ತ ಫಿಕ್ಸ್‌

ಬೆಂಗಳೂರು: ಬೆಂಗಳೂರು ಕರಗ ಶಕ್ತ್ಯೋತ್ಸವಕ್ಕೆ ಮುಹೂರ್ತ ನಿಗದಿಯಾಗಿದೆ

ಈ ವರ್ಷವೂ ಸಂಪ್ರದಾಯದಂತೆ ತಿಗಳರಪೇಟೆಯ ಶ್ರೀ ಧರ್ಮರಾಯ ಸ್ವಾಮಿ ದೇವಸ್ಥಾನದಲ್ಲಿ ವೈಭವದ ಆಚರಣೆಗಳು ನಡೆಯಲಿವೆ.

ಜ್ಞಾನೇಂದ್ರಸ್ವಾಮಿ ಅವರು ಈ ಬಾರಿ ಸತತ 16ನೇ ಬಾರಿಗೆ ಬೆಂಗಳೂರು ಕರಗವನ್ನು ಹೊರಲಿದ್ದಾರೆ. ಇವರ ಅನುಭವ ಮತ್ತು ಭಕ್ತಿ ಈ ಉತ್ಸವದ ಪ್ರಮುಖ ಆಕರ್ಷಣೆಯಾಗಿದೆ. ಒಟ್ಟು 11 ದಿನಗಳ ಕಾಲ ವಿವಿಧ ಧಾರ್ಮಿಕ ವಿಧಿವಿಧಾನಗಳೊಂದಿಗೆ ಕರಗ ಶಕ್ತ್ಯೋತ್ಸವ ನಡೆಯಲಿದೆ.

ಮಾರ್ಚ್.‌24, 2026ರಂದು ದೇವಸ್ಥಾನದಲ್ಲಿ ಧ್ವಜಾರೋಹಣ ನೆರವೇರಿಸುವ ಮೂಲಕ ಅಧಿಕೃತವಾಗಿ ಉತ್ಸವಕ್ಕೆ ಚಾಲನೆ ದೊರೆಯಲಿದೆ. ಮಾರ್ಚ್.‌30, 2026ರಂದು ರಾತ್ರಿ ಪ್ರಸಿದ್ಧ ಹಸಿಕರಗ ಮಹೋತ್ಸವ ಜರುಗಲಿದೆ.

 

 

Tags:
error: Content is protected !!