Mysore
26
overcast clouds

Social Media

ಸೋಮವಾರ, 23 ಜೂನ್ 2025
Light
Dark

ಜೈಲು ಸೇರುವ ಮುನ್ನ ಅಭಿಮಾನಿಗಳಿಗೆ ಸಂದೇಶ ನೀಡಿದ ದಾಸ!

ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್‌ 13 ವರ್ಷಗಳ ಬಳಿಕ ಮತ್ತೆ ಜೈಲು ಸೇರಿದ್ದಾರೆ. ಪೊಲೀಸ್‌ ಕಸ್ಟಡಿ ವಿಚಾರಣೆ ಶನಿವಾರ(ಜೂ.22) ಮುಗಿದ ಹಿನ್ನೆಲೆ ದರ್ಶನ್‌ರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ವಿಚಾರಣೆ ನಡೆಸಿದ ನ್ಯಾಯಾಲಯ 13ದಿನಗಳ ನ್ಯಾಯಂಗ ಬಂಧನಕ್ಕೆ ಒಪ್ಪಿಸಿದೆ.

ಹತ್ಯೆ ಪ್ರಕರಣದಲ್ಲಿ ದರ್ಶನ್ ಬಂಧನವಾದ ಬಳಿಕ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ದರ್ಶನ್‌ ಪೊಲೀಸ್‌ ಜೀಪ್‌ನಲ್ಲಿ ಪರಪ್ಪನ ಅಗ್ರಹಾರದತ್ತ ಪ್ರಯಾಣ ಬೆಳೆಸಿದ ವೇಳೆ ಪೊಲೀಸ್‌ ಚೀಪ್‌ನಲ್ಲೇ ಮೊದಲ ಬಾರಿಗೆ ತಮ್ಮ ಅಭಿಮಾನಿಗಳತ್ತ ಕೈ ಬೀಸಿ ಮಾತನಾಡಿದ್ದಾರೆ. ನನಗೆ ಏನು ಆಗುವುದಿಲ್ಲ, ಹೆದರಬೇಡಿ ಎಂದು ಅಭಿಮಾನಿಗಳಿಗೆ ಧೈರ್ಯ ತುಂಬಿದ್ದಾರೆ.

ಪೊಲೀಸ್‌ ಚೀಪ್‌ದಲ್ಲಿ ದರ್ಶನ್‌ ಇದ್ದಾಗ, ಹೊರಗೆ ನರೆದಿದ್ದ ಅವರ ಅಭಿಮಾನಿಗಳತ್ತ ಕೈಬೀಸಿದ ಅವರು, ಪ್ಲೈಯಿಂಗ್‌ ಕಿಸ್‌ ಕೊಟ್ಟು ನಾನು ಆರಾಮಾಗಿದ್ದೇನೆ. ನನಗೆ ಏನು ಆಗಲ್ಲ ಹೆದರಬೇಡಿ ಎಂದಿದ್ದಾರೆ.

ದರ್ಶನ್‌ ಹತ್ಯೆ ಪ್ರಕರಣದಲ್ಲಿ ಬಂಧನವಾದ ಬಳಿಕ ಅವರ ಅಭಿಮಾನಿಗಳು ಆತಂಕಕ್ಕೀಡಾಗಿದ್ದಾರೆ. ಇದೇ ವೇಳೇ ದಾಸ ಅಭಿಮಾನಿಗಳಿಗೆ ಧೈರ್ಯ ತುಂಬಿದ್ದಾರೆ. ಸದ್ಯ ಪೊಲೀಸ್‌ ಜೀಪ್‌ನಲ್ಲಿ ದರ್ಶನ್‌ ಪ್ರತಿಕ್ರಿಯಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್‌ ವೈರಲ್‌ ಆಗಿದೆ.

 

 

Tags:
error: Content is protected !!