ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಹನ್ನೆರೆಡು ದಿನಗಳ ಕಾಲ ಪೊಲೀಸರ ವಿಚಾರಣಾ ಕೈದಿಯಾಗಿ ತಿನಿಖೆ ಎದುರಿಸಿದ್ದು, ಇಂದು ಮದ್ಯಾಹ್ನ ಕೋರ್ಟ್ ಮುಂದೆ ಹಾಜರುಪಡಿಸುವ ಸಾಧ್ಯತೆಯಿದೆ.
12 ದಿನಗಳ ಕಾಲ ತನಿಖೆ ಎದುರಿಸಿರುವ ದರ್ಶನ್ ಅವರನ್ನು ಇಂದು ಎಸಿಎಂಎಂ ಕೋರ್ಟ್ ಎದುರು ಹಾಜರುಪಡಿಸಲಿದ್ದಾರೆ. ಮತ್ತು ದರ್ಶನ್ ಅಂಡ್ ಟೀಂ ಅವರಿಗೆ ನ್ಯಾಯಾಂಗ ಬಂಧನ ವಿಧಿಸುವುದು ಬಹುತೇಕ ಖಚಿತವಾಗಿದ್ದು, ಒಂದು ವೇಳೆ ನಟ ಜೈಲು ಸೇರಿದರೇ 13 ವರ್ಷಗಳ ಬಳಿಕ ಮತ್ತೊಮ್ಮೆ ಜೈಲುವಾಸ ಅನುಭವಿಸಲಿದ್ದಾರೆ.
ದರ್ಶನ್ ಜತೆಯಲ್ಲಿ ಪ್ರದೂಷ್, ವಿನಯ್ ಅವರ ವಿಚಾರಣೆ ಮುಗಿದಿದ್ದು, ಇಂದು ಮದ್ಯಾಹ್ನ ನ್ಯಾಯಾಲಯದ ಮುಂದೆ ಹಾಜರುಪಡಿಸಿದ ಬಳಿಕ ಮುಂದಿನ ಕ್ರಮ ಕೋರ್ಟ್ ಕೈಗೊಳ್ಳಲಿದೆ.
ಪೊಲೀಸರು ದರ್ಶನ್‌ರನ್ನು ಪೊಲೀಸರು ತನಿಖೆಗೆ ಕೇಳುವುದು ಬಹುತೇಕ ಕಡಿಮೆಯಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವುದು ಖಚಿತವಾಗಿದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್ ಸೆರೆವಾಸ ಮತ್ತೊಮ್ಮೆ ಆರಂಭವಾಗಲಿದೆ ಎಂದು ಹೇಳಲಾಗುತ್ತಿದೆ.