ರೇಣುಕಾಸ್ವಾಮಿ ಕೊಲೆ ಪ್ರಕರಣ: ತನಿಖಾಧಿಕಾರಿ ಗಿರೀಶ್‌ ನಾಯ್ಕ್‌ ದಿಢೀರ್‌ ಬದಲಾವಣೆ!

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಶಾಮೀಲಾಗಿದ್ದಾರೆ ಎನ್ನಲಾದ ನಟ ದರ್ಶನ್‌ ಪ್ರಕರಣಕ್ಕೆ ತಿರುವು ಪಡೆಯುವ ಹಂತದಲ್ಲಿಯೇ ದಿಢೀರ್‌ ಬದಲಾವಣೆ ನಡೆದಿದೆ.

ಈ ರೇಣುಕಾಸ್ವಾಮಿ ಪ್ರಕರಣದ ಮುಖ್ಯ ತನಿಖಾಧಿಕಾರಿಯನ್ನು ಬದಲಾವಣೆ ಮಾಡಿ ನೂತನ ತನಿಖಾಧಿಕಾರಿಯನ್ನು ನೇಮಕ ಮಾಡಿದ್ದಾರೆ. ಕಾಮಾಕ್ಷಿಪಾಳ್ಯದ ಇನ್ಸ್‌ಪೆಕ್ಟರ್‌ ಗಿರೀಶ್‌ ನಾಯ್ಕ್‌ ಅವರು ದರ್ಶನ್‌ ಪ್ರರಕಣದ ತನಿಖೆ ಮಾಡುತ್ತಿದ್ದರು. ಇವರನ್ನು ಇಂದು ದಿಢೀರ್‌ ಬದಲಾಣೆ ಮಾಡಿದ್ದು, ಅವರ ಜಾಗಕ್ಕೆ ವಿಜಯನಗರ ಉಪವಿಭಾಗದ ಎಸಿಪಿ ಚಂದನ್‌ ಕುಮಾರ್‌ ಅವರನ್ನು ನೇಮಕ ಮಾಡಲಾಗಿದೆ. ಇಂದಿನಿಂದ ಈ ತನಿಖೆ ಚಂದನ್‌ ಅವರಿಂದ ಮುಂದುವರೆಯಲಿದೆ.

ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಸಿ.ಕೆ ಅಚ್ಚುಕಟ್ಟು ಠಾಣೆಯಿಂದ ಗಿರೀಶ್‌ ನಾಯ್ಕ್‌ ಅವರನ್ನು ಕಾಮಾಕ್ಷಿಪಾಳ್ಯ ಠಾಣೆಗೆ ವರ್ಗಾಯಿಸಲಾಗಿತ್ತು. ಈ ಎರಡು ದಿನಗಳ ಹಿಂದೆ ತಮ್ಮ ಈ ಹಿಂದಿನ ಠಾಣೆಗೆ ವಾಪಸ್‌ ಮರಳಲು ಆದೇಶ ಬಂದ ಹಿನ್ನೆಲೆಯಲ್ಲಿ ರೇಣುಕಾಸ್ವಾಮಿ ಪ್ರಕರಣದಿಂದ ಗಿರೀಶ್‌ ಹೊರ ನಡೆದಿದ್ದಾರೆ. ಹೀಗಾಗಿ ಈ ಪ್ರಕರಣದ ಜಾವಾಬ್ದಾರಿ ಸಂಪೂರ್ಣವಾಗಿ ಎಸಿಪಿ ಚಂದನ್‌ ಅವರ ಹೆಗಲ ಮೇಲೆ ಬಿದ್ದಿದೆ.