Mysore
22
broken clouds
Light
Dark

ಇಂದು ಜಡ್ಜ್‌ ಮುಂದೆ ದರ್ಶನ್‌ ಆ್ಯಂಡ್ ಗ್ಯಾಂಗ್‌ ಹಾಜರು…

ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ ಹಾಗೂ ಗ್ಯಾಂಗ್‌ ನ್ಯಾಯಾಂಗ ಬಂಧನದಲ್ಲಿದ್ದಾರೆ. ಇಂದು(ಜು.18) 41 ದಿನಗಳ ನ್ಯಾಯಾಂಗ ಬಂಧನದ ಅವಧಿ ಪೂರ್ಣಗೊಳ್ಳಲಿದೆ. ಹೀಗಾಗಿ ದರ್ಶನ್‌ ಹಾಗೂ ಗ್ಯಾಂಗ್‌ನ್ನು ಮತ್ತೆ ನ್ಯಾಯಾಧೀಶರ ಎದುರು ಹಾಜರು ಪಡಿಸಲಾಗುತ್ತಿದೆ.

ನಟ ದರ್ಶನ್‌ ಹಾಗೂ ಗ್ಯಾಂಗ್‌ ಜೂನ್‌ 11 ರಂದು ಬಂಧನಕ್ಕೆ ಒಳಗಾದರು. ಆದರೆ ಬಂಧನವಾಗಿ ತಿಂಗಳೂ ಮೇಲೆ ಕಳೆದರೂ ಇನ್ನೂ ಜಾರ್ಚ್‌ಶೀಟ್‌ ಸಲ್ಲಿಕೆ ಮಾಡಿಲ್ಲ. ಈ ಕಾರಣಕ್ಕೆ ದರ್ಶನ್‌ ಅವರ ನ್ಯಾಯಾಂಗ ಬಂಧನವನ್ನು ವಿಸ್ತರಣೆಗೆ ಕೋರಲಾಗಿದೆ. ಆರೋಪಿಗಳನ್ನು ಜಡ್ಜ್‌ ಮುಂದೆ ವಿಡಿಯೋ ಕಾನ್ಫರೆನ್ಸ್‌ ಮೂಲಕ ಹಾಜರುಪಡಿಸಲು ನಿರ್ಧರಿಸಲಾಗಿದೆ. ಈ ವೇಳೆ ದರ್ಶನ್‌ ಹಾಗೂ ಗ್ಯಾಂಗ್‌ನ ನ್ಯಾಯಾಂಗ ಬಂಧನ ಅವಧಿ ಮತ್ತೆ ವಿಸ್ತರಣೆ ಆಗೋ ಸಾಧ್ಯತೆ ಇದೆ.