Mysore
27
clear sky

Social Media

ಭಾನುವಾರ, 22 ಮಾರ್ಚ್ 2026
Light
Dark

ಸಿದ್ದರಾಮಯ್ಯ ಪಾಲಿಗೆ ಕತ್ತಲು, ಡಿಕೆಶಿ ಪಾಲಿಗೆ ಬೆಳಕು ಶುರುವಾಗಿದೆ: ಆರ್.‌ಅಶೋಕ್‌

The Chief Minister himself is the brand ambassador of fake news: Opposition Leader R. Ashoka

ಬೆಂಗಳೂರು: ರಾಜ್ಯ ಕಾಂಗ್ರೆಸ್‌ನಲ್ಲಿ ಬದಲಾವಣೆ ಅನ್ನೋದು ಪಕ್ಕಾ ಎಂದು ಪ್ರತಿಪಕ್ಷ ನಾಯಕ ಆರ್.‌ಅಶೋಕ್‌ ಭವಿಷ್ಯ ನುಡಿದಿದ್ದಾರೆ.

ಈ ಕುರಿತು ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಕೆಶಿ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಶಾಸಕ ಇಕ್ಬಾಲ್‌ ಹುಸೇನ್‌ ಪದೇ ಪದೇ ಹೇಳಿಕೆ ನೀಡುತ್ತಿದ್ದಾರೆ. ನೋಟೀಸ್‌ ಕೊಟ್ಟರೂ ಹೇಳುತ್ತಿದ್ದಾರೆ ಎಂದರೆ ಎಷ್ಟು ಧೈರ್ಯವಿರಬೇಕು ಅವರಿಗೆ ಎಂದು ಪ್ರಶ್ನೆ ಮಾಡಿದರು.

ರಾಜ್ಯ ಕಾಂಗ್ರೆಸ್‌ನಲ್ಲಿ ಬದಲಾವಣೆ ಅನ್ನೋದು ಪಕ್ಕಾ. ಸಿದ್ದರಾಮಯ್ಯ ಐದು ವರ್ಷ ಸಿಎಂ ಆಗಿರುತ್ತಾರೆ ಎನ್ನುವುದಾದರೆ ಜಾತಿಗಣತಿಗೆ ಆತುರವೇನಿತ್ತು? ಎಂದು ಪ್ರಶ್ನೆ ಮಾಡಿದರು.

ಇನ್ನು ಮುಂದುವರಿದು ಮಾತನಾಡಿದ ಅವರು, ಇದೆಲ್ಲವೂ ನವೆಂಬರ್‌ ಕ್ರಾಂತಿಯ ಸಂಕೇತ. ಗ್ರಹಣ ಕಾಲದಲ್ಲಿ ಕತ್ತಲಾದಂತೆ ಸಿದ್ದರಾಮಯ್ಯ ಪಾಲಿಗೆ ಕತ್ತಲು. ಡಿಕೆಶಿ ಪಾಲಿಕೆ ಇನ್ನೇನು ಬೆಳಕು ಶುರುವಾಗಿದೆ. ಬೆಂಬಲಿಗರ ಹೇಳಿಕೆ ಹಿಂದೆ 100% ಡಿಸಿಎಂ ಡಿಕೆಶಿ ಇದ್ದಾರೆ ಎಂದು ಹೇಳಿದರು.

Tags:
error: Content is protected !!