ರಾಮನಗರ : ಊಟ ಮಾಡುತ್ತಿದ್ದಾಗಲೇ ಕರ್ತವ್ಯದಲ್ಲಿದ್ದ ಡಿ ಗ್ರೂಪ್ ನೌಕರ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಯೋಗೇಶ್ ಕುಮಾರ್ (೪೫) ಮೃತ ದುರ್ದೈವಿಯಾಗಿದ್ದಾರೆ. ಯೋಗೇಶ್ ಕುಮಾರ್ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಡಿ ಗ್ರೂಪ್ ನೌಕರನಾಗಿ ಕೆಲಸ ನಿರ್ವಹಿಸುತ್ತಿದ್ದರು. ಶುಕ್ರವಾರ ಮಧ್ಯಾಹ್ನ ಊಟ ಮಾಡುವಾಗ ಹೃದಯಾಘಾತ ಸಂಭವಿಸಿ ಕುಸಿದು ಬಿದ್ದಿದ್ದಾರೆ. ತಕ್ಷಣ ಇತರ ಸಿಬ್ಬಂದಿ ಆಸ್ಪತ್ರೆಗೆ ಯೋಗೇಶ್ ಕುಮಾರ್ ನನ್ನ ದಾಖಲಿಸಿದ್ದಾರೆ ಅಷ್ಟೋತ್ತಿಗೆ ಯೋಗೇಶ್ ಮೃತಪಟ್ಟಿದ್ದರು. ಇನ್ನು ಯೋಗೇಶ್ ಕುಮಾರ್ ಕುಸಿದು ಬೀಳು ದೃಶ್ಯ ಸಿಸಿಟಿವಿ ಯಲ್ಲಿ ಸೆರೆಯಾಗಿದೆ.