ಬೆಂಗಳೂರು: ಸಿಲಿಂಡರ್ ಸ್ಫೋಟಗೊಂಡು ಗೋಡೌನ್ ಹೊತ್ತಿ ಉರಿದ ಘಟನೆ ಬೇಗೂರಿನ ಅಕ್ಷಯನಗರದಲ್ಲಿ ನಡೆದಿದೆ.
ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಬೆಂಕಿ ಗೋಡೌನ್‌ಗೆ ಹಬ್ಬಿದೆ. ಪೇಪರ್ ಹಾಗೂ ಕಾಟನ್ ಬಾಕ್ಸ್‌ಗಳಿಗೆ ಬೆಂಕಿ ಹೊತ್ತಿ ಉರಿದಿದೆ.
ಪರಿಣಾಮ ಇಡೀ ಗೋಡೌನ್ ಸುಟ್ಟು ಭಸ್ಮವಾಗಿದ್ದು, ವಿಷಯ ತಿಳಿದು ಸ್ಥಳಕ್ಕಾಗಮಿಸಿ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅದೃಷ್ಟವಶಾತ್ ಬೆಂಕಿ ಅವಘಡದಿಂದ ಬೇರೆ ಸಿಲಿಂಡರ್ ಸ್ಫೋಟಿಸಿಲ್ಲ. ಇದರಿಂದ ಯಾವುದೇ ಪ್ರಾಣಾಪಾಯವಾಗಿಲ್ಲ. ಲಕ್ಷಾಂತರ ರೂ ಮೌಲ್ಯದ ಗುಜರಿ ವಸ್ತುಗಳು ಸುಟ್ಟು ಕರಕಲಾಗಿದೆ.





