Mysore
28
few clouds

Social Media

ಶುಕ್ರವಾರ, 20 ಡಿಸೆಂಬರ್ 2024
Light
Dark

ಕರ್ನಾಟಕದಲ್ಲಿ ಕಾಂಗ್ರೆಸ್‌ ಅಂತ್ಯ ಕಾಣಲಿದೆ: ಮಾಜಿ ಪ್ರಧಾನಿ ಎಚ್‌.ಡಿ ದೇವೇಗೌಡ

ಬೆಂಗಳೂರು: ರಾಜ್ಯದಲ್ಲಿ ಈ ಬಾರಿ ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ನಾವು ನಿರೀಕ್ಷೆಗಿಂತ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತೇವೆ, ಲೋಕಸಭಾ ಚುನಾವಣೆಯಲ್ಲಿ ಜನಾದೇಶ ನಮ್ಮ ಪರವಾಗಿದೆ. ಕರ್ನಾಟಕದಲ್ಲಿ ಕಾಂಗ್ರೆಸ್‌ ಅಂತ್ಯ ಕಾಣಲಿದೆ ಎಂದು ಮಾಜಿ ಪ್ರಧಾನಿ ಎಚ್‌.ಡಿ ದೇವೇಗೌಡ ಹೇಳಿದ್ದಾರೆ.

ನಗರದಲ್ಲಿಂದು ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದರ ಅವರು, ಕಳೆದ ೬೦ ವರ್ಷಗಳಿಂದ ರಾಜಕೀಯ ಮಾಡುತ್ತಾ ಬಂದಿರುವ ನನಗೇ ಇವರು ಹೇಳ್ತಾರೆ. ನಾನು ಜಾತ್ಯತೀತ ಆದರ್ಶಗಳಲ್ಲಿ ಸ್ವಲ್ಪವೂ ರಾಜಿ ಮಾಡಿಕೊಳ್ಳದೇ ದೇಶವನ್ನು ಆಳಿದ್ದೇನೆ. ಆದರೆ ನೀವು(ಇಂಡಿಯಾ ಬಣ) ದೇವೇಗೌಡರನ್ನು ಅವಮಾನಿಸಿದ್ದೀರಿ. ನಾನು ಇವತ್ತು ಹೇಳುತ್ತೇನೆ, ಕರ್ನಾಟಕದಲ್ಲಿ ಕಾಂಗ್ರೆಸ್‌ ಅಂತ್ಯ ಕಾಣಲಿದೆ. ಸಿಎಂ ಸಿದ್ದರಾಮಯ್ಯ, ಡಿಕೆಶಿ ನೇತೃತ್ವದ ಕಾಂಗ್ರೆಸ್‌ನ್ನು ಕರ್ನಾಟಕದಲ್ಲಿ ನಾವು ಸೋಲಿಸಿಯೇ ತೀರುತ್ತೇವೆ ಎಂದು ಕಿಡಿಕಾರಿದರು.

ಲೋಕಸಭಾ ಚುನಾವಣೆಯಲ್ಲಿ ಸೀಟ್‌ ಹಂಚಿಕೆ ಸಂಬಂಧ ಮಾತನಾಡಿದ ದೇವೇಗೌಡರು, ಸೀಟ್‌ ಹಂಚಿಕೆ ವಿಚಾರದಲ್ಲಿ ಯಾವುದೇ ಗೊಂದಲವಿಲ್ಲ. ನಾವು ಕಾಂಗ್ರೆಸ್‌ನ್ನು ಸೋಲಿಸಬೇಕು ಎಂದು ಹೇಳಿದರು.

ಪಂಚರಾಜ್ಯ ಚುನಾವಣೆ ನಡೆದ ಸಂದರ್ಭದಲ್ಲಿ ಡಿಕೆ ಶಿವಕುಮಾರ್‌ ಎಷ್ಟು ಹಣ ಸಾಗಿಸಿದ್ದಾರೆ ಮತ್ತು ಎಷ್ಟು ಹಣ ಸೀಜ್‌ ಆಗಿದೆ ಎಂಬುದರ ಬಗ್ಗೆ ಚುನಾವಣಾ ಆಯೋಗ ಗಮನಹರಿಸಿದೆ ಎಂದರು.

ಇನ್ನೂ ಇದೇ ವೇಳೆ ಹಿಂದೂ ಕಾರ್ಯಕ್ರತರ ವಿರುದ್ಧ ರಾಜ್ಯ ಸರ್ಕಾರದ ಕ್ರಮಗಳ ಬಗೆಗಿನ ಪ್ರಶ್ನೆಗೆ, ಕಾಂಗ್ರೆಸ್‌ ಸರ್ಕಾರ ಸೇಡಿನ ರಾಜಕಾರಣ ಮಾಡುತ್ತಿದೆ. ಸಿಎಂ ಸಿದ್ದರಾಮಯ್ಯ ಇಡೀ ದೇಶಕ್ಕೆ ಬುದ್ದಿ ಹೇಳುತ್ತಾರೆ. ಆದರೆ, ಅಕ್ರಮ ತಡೆಯುವ ಶಕ್ತಿ ಇದೆಯಾ? ದೇಶದಲ್ಲಿ ಟಿಪ್ಪು ಸುಲ್ತಾನ್‌ ಬಿಟ್ಟರೇ ಬೇರೆ ವಿಚಾರವೇ ಇಲ್ಲವಾ. ಎನ್‌ಡಿಎ ಸೋಲಿಸಿ ೨೦ ಸ್ಥಾನಗಳನ್ನು ಗೆಲ್ಲುವ ಕನಸು ಕಾಣುತ್ತಿರುವ ಕಾಂಗ್ರೆಸ್‌ ಕನಸು, ಕನಸಾಗಿಯೇ ಉಳಿಯಲಿದೆ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ