Mysore
21
overcast clouds
Light
Dark

ಕಾಂಗ್ರೆಸ್‌ ಶಾಸಕ ಮಹಾಂತೇಶ್‌ ಕೌಜಲಗಿ ಕಾರು ಅಪಘಾತ

ಬೆಂಗಳೂರು: ಕಾಂಗ್ರೆಸ್ ನ ಬೈಲಹೊಂಗಲ ಶಾಸಕ ಮಹಾಂತೇಶ ಕೌಜಲಗಿ ಅವರ ಕಾರು ವಿಧಾನಸೌಧದ ಮುಂಭಾಗದಲ್ಲೇ ಅಪಘಾತಕ್ಕೀಡಾಗಿದೆ.

ಅಪಘಾತದಲ್ಲಿ ಶಾಸಕ ಮಹಾಂತೇಶ್‌ ಕೌಜಲಗಿ ಅವರಿಗೆ ಸಣ್ಣಪುಟ್ಟ ಗಾಯಗಾಳಾಗಿವೆ. ವಿಧಾನಸೌಧದ ಹತ್ತಿರ ಅತೀವೇಗವಾಗಿ ಬಂದ ಪೊಲೋ ಕಾರು ಶಾಸಕರ ಭವನದಿಂದ ಬಂದ ಮಹಾಂತೇಶ್‌ ಅವರ ಕಾರಿಗೆ ಗುದ್ದಿಗೆ. ಅಪಘಾತದಲ್ಲಿ ಸಣ್ಣಪುಟ್ಟ ಗಾಯಗಳಾಗಿದ್ದರಿಂದ, ಶಾಸಕ ಮಹಾಂತೇಶ್‌ ಕೌಜಲಗಿಯವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಬ್ಬನ್‌ ಪಾರ್ಕ್‌ ಸಂಚಾರ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.