ಬೆಂಗಳೂರು: ಮುಡಾ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಕೋರಿದ್ದ ಅರ್ಜಿಯನ್ನು ಇಂದು ಧಾರವಾಡ ಹೈಕೋರ್ಟ್ ವಜಾಗೊಳಿಸಿದೆ. ಕೋರ್ಟ್‌ನ ಈ ಆದೇಶವನ್ನು ಸ್ವಾಗತಾರ್ಹಾವಾಗಿದ್ದು, ಸತ್ಯಕ್ಕೆ ಸಂದ ಜಯ ಎಂದು ಕಾಂಗ್ರೆಸ್ ನಾಯಕರು ತಿಳಿಸಿದ್ದಾರೆ.
ಮೈಸೂರಿನಲ್ಲಿ ಇಂದು(ಫೆಬ್ರವರಿ.೭) ಈ ಕುರಿತು ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ದರೋಡೆಕೊರರನ್ನು ಸತ್ಯ ಹರೀಶ್ಚಂದ್ರ ಎಂದು ಬಿಂಬಿಸಿಕೊಳ್ಳುತ್ತಿದ್ದರು. ಇಂದು ನಮ್ಮ ನಾಯಕ ಸಿದ್ದರಾಮಯ್ಯಗೆ ಜಯ ಸಿಕ್ಕಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಡಿಸಿಎಂ ಡಿ.ಕೆ.ಶಿವಕುಮಾರ್
ಈ ಕುರಿತು ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು, ಮುಡಾ ಪ್ರಕರಣವನ್ನು ಯಾಕೆ ಸಿಬಿಐಗೆ ವಹಿಸುತ್ತಾರೆ. ಈಗಾಗಲೇ ಪ್ರಕರಣವನ್ನು ಎರಡು ಸಂಸ್ಥೆಗಳು ತನಿಖೆ ನಡೆಸುತ್ತಿವೆ. ಹೀಗಿರುವಾಗ ಮತ್ತೊಂದು ಸಂಸ್ಥೆಗೆ ಯಾಕೆ ನೀಡಬೇಕು ಎಂದು ಪ್ರಶ್ನಿಸಿದರು.
ಈಗಾಗಲೇ ನಾನು ನನ್ನ ಮೇಲೆ ಹಾಕಿರುವ ಕೇಸ್ ಸರಿ ಇಲ್ಲವೆಂದು ಹೊಡೆದಾಡುತ್ತಿದ್ದೇನೆ. ಈ ಕಾರಣಕ್ಕೆ ಸುಪ್ರೀಂಕೋರ್ಟ್‌ನಲ್ಲಿ ಹೋರಾಟ ಮಾಡುತ್ತಿದ್ದೇನೆ. ಹೀಗಾಗಿ ಒಂದೇ ಪ್ರಕರಣದಲ್ಲಿ ಒಟ್ಟಿಗೆಯೇ ಎರಡರಿಂದ ಮೂರು ಸಂಸ್ಥೆಗಳು ತನಿಖೆ ಮಾಡೋದು ಸರಿಯಲ್ಲ ಎಂದು ಹೇಳಿದರು.
ಸಿಎಂ ಕಾನೂನು ಸಲಹೆಗಾರ ಪೊನ್ನಣ್ಣ
ಈ ಬಗ್ಗೆ ಕಾನೂನು ಸಲಹೆಗಾರ ಪೊನ್ನಣ್ಣ ಪ್ರತಿಕ್ರಿಯೆ ನೀಡಿ, ಸ್ನೇಹಮಯಿ ಕೃಷ್ಣ ಅವರು ಸುಪ್ರೀಂಕೋರ್ಟ್ ಮೆಟ್ಟಿಲೇರುತ್ತವೆಂದು ಹೇಳಿದ್ದಾರೆ. ಹೀಗಾಗಿ ಇದನ್ನೆಲ್ಲವನ್ನೂ ಕಾನೂನು ಪ್ರಕಾರ ಹೋರಾಟ ಮಾಡುತ್ತೇವೆ ಅವರು ಸುಪ್ರೀಂಕೋರ್ಟ್‌ಗೆ ಹೋಗುತ್ತಾರೋ ಅಥವಾ ಅವರ ಹಿಂದೆ ಇರೋರು ಹೋಗ್ತಾರೋ ನೋಡೋಣ ಎಂದರು.
ಇಂದು ತೀರ್ಪು ಪ್ರಕಟಿಸಿರುವ ಹೈಕೋರ್ಟ್, ಲೋಕಾಯುಕ್ತ ಸ್ವತಂತ್ರ ಸಂಸ್ಥೆಯಾಗಿದೆ ಎಂದು ಹೇಳಿದೆ. ಮುಡಾ ಪ್ರಕರಣವನ್ನು ಸಿಬಿಐಗೆ ವಹಿಸಲು ಬೇಕಾದ ಅಂಶಗಳಿಲ್ಲ ಎಂದು ಹೇಳಿದೆ. ಹೀಗಾಗಿ ನಾವು ಕಾನೂನು ತನಿಖೆಗೆ ಎಲ್ಲಾ ರೀತಿಯ ತನಿಖೆಗೂ ಸಹಕಾರ ನೀಡುತ್ತೇವೆ. ಕಾನೂನಿನ ಚೌಕಟ್ಟಿನಲ್ಲಿಯೇ ಹೋರಾಟ ನಡೆಸುತ್ತೇವೆ ಎಂದು ಹೇಳಿದರು.