Mysore
25
overcast clouds
Light
Dark

ಪ್ರಜ್ವಲ್‌ ಕಾಮಕಾಂಡ ಮೊದಲೇ ಗೊತ್ತಿತ್ತು ಎಂದ ಸಿಟಿ ರವಿ: ಆತನ ಸಾಧನೇ ಮೆಚ್ಚಿದರೇ ಎಂದು ಕಾಲೆಳೆದ ಕಾಂಗ್ರೆಸ್‌!

ಬೆಂಗಳೂರು: ಪ್ರಜ್ವಲ್ ರೇವಣ್ಣರ ಅಮಾನವೀಯ ಕೃತ್ಯ ಬಿಜೆಪಿಯವರಿಗೆ ಮೊದಲೇ ತಿಳಿದಿತ್ತಂತೆ, ತಿಳಿದೂ ತಿಳಿದೂ ಆತನ ಪರ ಪ್ರಚಾರ ಮಾಡಿದ್ದೇಕೆ? ಆತನನ್ನು ಬೆಂಬಲಿಸಿದ್ದೇಕೆ? ಎಂದು ರಾಜ್ಯ ಕಾಂಗ್ರೆಸ್‌ ಬಿಜೆಪಿಯನ್ನು ಪ್ರಶ್ನಿಸಿದ್ದಾರೆ.

ಏ.26 ರಂದು ರಾಜ್ಯದಲ್ಲಿ ಮೊದಲ ಹಂತದಲ್ಲಿ ಲೋಕಸಭಾ ಚುನಾವಣೆ ನಡೆದಿತ್ತು. ಇದಕ್ಕೆ ಎರಡು ದಿನಗಳ ಹಿಂದೆ, ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಅವರ ಸಾವಿರಕ್ಕು ಹೆಚ್ಚು ಲೈಂಗಿಕ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದವು. ಇದನ್ನು ಖಂಡಿಸಿದ್ದ ನೆಟ್ಟಿಗರು ಟೀಕಾಸ್ತ್ರ ನಡೆಸಿದ್ದರು.

ಇನ್ನು ಈ ಪ್ರಕರಣ ಸಂಬಂಧ ಸಿಎಂ ಸಿದ್ದರಾಮಯ್ಯ ಅವರು ಪ್ರಕರಣವನ್ನು ಎಸ್‌ಐಟಿ ತನಿಖೆಗೆ ವಹಿಸಿತ್ತು. ಮತ್ತು ಈ ಪ್ರಕರಣ ಕಾವು ಪಡೆದುಕೊಳ್ಳುತ್ತಿದ್ದಂತೆ ಪ್ರಜ್ವಲ್‌ ರೇವಣ್ಣ ವಿದೇಶಕ್ಕೆ ಹಾರಿ ಹೋಗಿದ್ದಾರೆ.

ಇನ್ನು ಪ್ರಜ್ವಲ್‌ ಪ್ರಕರಣಕ್ಕೆ ಸಂಬಂಧಿಸಿಂತೆ ಬಿಜೆಪಿ ಮುಖಂಡ ಸಿಟಿ ರವಿ ಹೊಸ ಬಾಂಬ್‌ ಸಿಡಿಸಿದ್ದಾರೆ. ಇದು ಸದ್ಯ ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ ಮೂಡಿಸಿದೆ.

ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಪ್ರಜ್ವಲ್‌ ರೇವಣ್ಣ ರೇವಣ್ಣ ವೀಡಿಯೋ ಪ್ರಕರಣ ಚುನಾವಣೆಗೆ ಎರಡು ದಿನಗಳ ಮುಂಚೆಯೆ ಗೊತ್ತಿತ್ತು. ಈ ಬಗ್ಗೆ ಎಚ್‌ಡಿ ಕುಮಾರಸ್ವಾಮಿ ಅವರು ಸ್ಪಷ್ಟನೆ ನೀಡಿದ್ದಾರೆ. ಪ್ರಜ್ವಲ್‌ಗೆ ಟಿಕೆಟ್‌ ನೀಡದಿರುವಂತೆ ಪತ್ರ ಬರೆದಿರುವ ಬಗ್ಗೆ ನಮಗೆ ಮಾಹಿತಿ ಇಲ್ಲ. ಮತ್ತು ಟಿಕೆಟ್‌ ನೀಡಿರುವುದು ನಾವಲ್ಲ, ಜೆಡಿಎಸ್‌ನವರು. ಈ ವೀಡಿಯೋ ಪ್ರಕರಣದಿಂದ ಚುನಾವಣೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಹೇಳುವ ಮೂಲಕ ಕಾಂಗ್ರೆಸ್‌ಗೆ ಆಹಾರವಾಗಿದ್ದಾರೆ.

ಇನ್ನು ಸಿಟಿ ರವಿ ಹೇಳಿಕೆನ್ನು ಉಲ್ಲೇಖಿಸಿ ಟ್ವೀಟ್‌ ಮಾಡಿರುವ ಕಾಂಗ್ರೆಸ್‌, ಆತನ ಕೃತ್ಯ ತಿಳಿದಿದ್ದರು, ಆತನ ಪರ ಪ್ರಚಾರ ಮಾಡಿದ್ದೇಕೆ? ಆತನನ್ನು ಬೆಂಬಲಿಸಿದ್ದೇಕೆ? ಆತನ ಕುಕೃತ್ಯಕ್ಕೆ ಬಿಜೆಪಿಯ ಬೆಂಬಲವಿದೆಯೇ? ಎಂದು ಪ್ರಶ್ನೆ ಮಾಡಿದ್ದಾರೆ.

ಸಿಟಿ ರವಿ ಅವರೇ ನಿಮ್ಮದೇ ಪಕ್ಷದ ಮುಖಂಡರು ಮಾಹಿತಿ ನೀಡಿದ ನಂತರವೂ ಮೋದಿಯವರು ಪ್ರಜ್ವಲ್‌ ಬೆನ್ನು ತಟ್ಟಿದ್ದೇಕೆ? ಆತನ ಸಾಧನೆ ಮೆಚ್ಚಿದರೇ? ಎಂದು ಆಕ್ರೋಶ ಹೊರಹಾಕಿದ್ದಾರೆ.