Mysore
24
overcast clouds

Social Media

ಶುಕ್ರವಾರ, 18 ಏಪ್ರಿಲ 2025
Light
Dark

ವಿಧಾನ ಪರಿಷತ್‌ ಚುನಾವಣೆ: ಕಾಂಗ್ರೆಸ್‌ನಿಂದ ಯತೀಂದ್ರ, ಬಿಲ್ಕಿಸ್‌ ಭಾನುಗೆ ಮಣೆ

ನವದೆಹಲಿ: ಇದೇ ಜೂನ್‌.13 ರಂದು ನಡೆಯಲಿರುವ ವಿಧಾನ ಪರಿಷತ್‌ ಚುನಾವಣೆಗೆ ಕಾಂಗ್ರೆಸ್‌ ತನ್ನ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದೆ. ಕಾಂಗ್ರೆಸ್‌ ಹೈಕಮಾಂಡ್‌ ತನ್ನ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ಊಹೆಯಂತೆ ಸಿಎಂ ಸಿದ್ದರಾಮಯ್ಯ ಅವರ ಮಗ ಯತೀಂದ್ರ ಸಿದ್ದರಾಮಯ್ಯ ಅವರಿಗೆ ಟಿಕೆಟ್‌ ನೀಡಿದ್ದು, ಅಚ್ಚರಿಯಂಬಂತೆ ಬಿಲ್ಕಿಸ್‌ ಭಾನು ಅವರಿಗೆ ಮಣೆ ಹಾಕಿದೆ.

ವಿಧಾನ ಸಭೆಯ ಸಂಖ್ಯಾಬಲದ ಆಧಾರದಲ್ಲಿ ಒಟ್ಟು 11 ಸ್ಥಾನಗಳಲ್ಲಿ 7 ಸ್ಥಾನಗಳು ಕಾಂಗ್ರೆಸ್‌ ತೆಕ್ಕೆಗೆ ಬೀಳಲಿವೆ. ಉಳಿದ ನಾಲ್ಕು ಕ್ಷೇತ್ರಗಳಲ್ಲಿ ಬಿಜೆಪಿಗೆ ಮೂರು ಹಾಗೂ ಜೆಡಿಎಸ್‌ಗೆ ಒಂದು ಸ್ಥಾನ ಸಿಗಲಿದೆ.

ಇನ್ನು ಅತೀ ಜಾಣ್ಮೆಯಿಂದ ತನ್ನ ಅಭ್ಯರ್ಥಿಗಳನ್ನು ಆಯ್ಕೆ ಮಾಡಿರುವ ಕಾಂಗ್ರೆಸ್‌ ಎಲ್ಲಾ ಜಾತಿಯನ್ನು ಪರಿಗಣನೆಗೆ ತೆಗೆದುಕೊಳ್ಳುವ ಮೂಲಕ ತನ್ನ ಅಹಿಂದಾ ತತ್ವವನ್ನು ಎತ್ತಿ ಹಿಡಿದಿದೆ. ಇನ್ನು ಜಗದೀಶ್‌ ಶೆಟ್ಟರ್‌ ಅವರು ರಾಜೀನಾಮೆ ನೀಡಿದ ಬಳಿಕ ತೆರವಾಗಿದ್ದ ಸ್ಥಾನಕ್ಕೆ ಬಸನಗೌಡ ಬಾದರ್ಲಿ ಅವರನ್ನು ಆಯ್ಕೆ ಮಾಡಿದ್ದಾರೆ.

ಕಾಂಗ್ರೆಸ್‌ ಅಭ್ಯರ್ಥಿಗಳ ಪಟ್ಟಿ: ಯತೀಂದ್ರ ಸಿದ್ದರಾಮಯ್ಯ (ಕುರುಬ), ಗೋವಿಂದರಾಜು (ಒಕ್ಕಲಿಗ), ಬಿಲ್ಕಿಸ್‌ ಭಾನು (ಮುಸ್ಲಿಂ), ಐವಾನ್‌ ಡಿಸೋಜಾ (ಕ್ರಿಶ್ಚಿಯನ್‌), ವಸಂತ ಕುಮಾರ್‌ (ಎಸ್ಸಿ), ಬೋಸರಾಜ್‌ (ಕ್ಷತ್ರೀಯ), ಬಸನಗೌಡ ಬಾದರ್ಲಿ (ಲಿಂಗಾಯಿತ), ಜಯದೇವ ಗುತ್ತೇದಾರ್‌ (ಈಡಿಗ)

Tags: