Mysore
26
overcast clouds

Social Media

ಗುರುವಾರ, 20 ಆಗಸ್ಟ್ 2026
Light
Dark

ನಾರಾಯಣಸ್ವಾಮಿಗೆ ಕಮಾಂಡೆಂಟ್‌ ಬೆಳ್ಳಿ ಪದಕ

ಮೈಸೂರು: ನಗರದ ಸಂತ ಮರಿಯಾ ದಿ ಮಥಿಯಾಸ್ ಶಾಲೆಯ ಶಿಕ್ಷಕ ನಾರಾಯಣಸ್ವಾಮಿ ಅವರು ಮೈಸೂರು ೩ ಕರ್ನಾಟಕ ರಾಷ್ಟ್ರೀಯ ಕೆಡೆಟ್ ಕಾರ್ಪ್ ನೆವಲ್ ಯೂನಿಟ್‌ನಿಂದ ಆಯ್ಕೆಯಾಗಿ ಮಹಾರಾಷ್ಟ್ರದ ನಾಗಪುರದ ಕಾಂಫ್ಟಿಯಲ್ಲಿರುವ ಎನ್‌ಸಿಸಿ ಆಫೀಸರ್ ಟ್ರೈನಿಂಗ್ ಅಕಾಡೆಮಿಯಲ್ಲಿ ಭಾಗವಹಿಸಿ, ಪ್ರಿ ಕಮಿಷನ್ ಕೋರ್ಸ್ ತರಬೇತಿಯನ್ನು ಯಶಸ್ವಿಯಾಗಿ ಮುಗಿಸಿ ಅಸೋಸಿಯೇಟ್ ಎನ್‌ಸಿಸಿ ಅಧಿಕಾರಿಯಾಗಿ ಆಯ್ಕೆಯಾಗಿದ್ದಾರೆ ಎಂದು ಸಂತ ಮರಿಯಾ ದಿ ಮಥಿಯಾಸ್ ಶಾಲೆಯ ಪ್ರಾಂಶುಪಾಲರಾದ ಸಹೋದರಿ ಮಿನಿ ಪಳ್ಳಿಪಾಡನ್ ತಿಳಿಸಿದರು.

ಈ ಕುರಿತು ನಗರದ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ತರಬೇತಿಯಲ್ಲಿ ಭಾರತದ ಎ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಸರಿಸುಮಾರು ೬೫೦ ಜನ ಶಿಕ್ಷಕರು, ಅದರಲ್ಲಿ ದಕ್ಷಿಣ ಭಾರತದ ರಾಜ್ಯಗಳಿಂದ ೨೦೦ ಜನ ಶಿಕ್ಷಕರು ಭಾಗವಹಿಸಿದ್ದರು. ಎರಡು ತಿಂಗಳ ಅವಧಿಯ ಈ ಕಠಿಣ ಸೇನಾ ತರಬೇತಿಯಲ್ಲಿ ಲಿಖಿತ ಪರೀಕ್ಷೆಗಳು, ಡಿಎಸ್ಟಿ ಡ್ರಿಲ, -ರಿಂಗ್ ಮತ್ತು ದೈಹಿಕ ತರಬೇತಿ ಪರೀಕ್ಷೆಗಳು ನಡೆದಿದ್ದು, ಎ ಪರೀಕ್ಷೆಗಳಲ್ಲಿ ಮೊದಲ ಪ್ರಯತ್ನದ ನಾರಾಯಣಸ್ವಾಮಿಯವರು ಉತ್ತೀರ್ಣರಾಗಿ, ಅತಿ ಹೆಚ್ಚು ಅಂಕಗಳನ್ನು ಗಳಿಸಿದ್ದು, ಬೆಳ್ಳಿ ಪದಕವನ್ನು ಪಡೆದಿದ್ದಾರೆ. ಇದರ ಜೊತೆಗೆ ಮೇಜರ್ ಜನರಲ್ ಶರಬ್ಜಿತ್ ಸಿಂಗ್ ಬಕ್ಷಿ -ಸೇನಾ ಮೆಡಲ್ ಮತ್ತು ವಿಶಿ ಸೇನಾ ಮೆಡಲ್, ಪ್ರಮಾಣ ಪತ್ರ ಮತ್ತು ಪಾರಿತೋಷಕವನ್ನು ಪಡೆದಿರುವುದು ನಮ್ಮ ಹೆಮ್ಮೆ ಎಂದು ಹೇಳಿದರು.

ಇಡೀ ದಕ್ಷಿಣ ಭಾರತದಲ್ಲಿಯೇ ಈ ಬಾರಿ ಪದಕ ಗೆದ್ದ ಏಕೈಕ ವ್ಯಕ್ತಿ ಇವರಾಗಿದ್ದು, ಮೈಸೂರಿನ ಮಾನಸಗಂಗೋತ್ರಿಯಲ್ಲಿರುವ ೩ ಕರ್ನಾಟಕ ಎನ್‌ಸಿಸಿ ನೆವಲ್ ಯೂನಿಟ್ ಇತಿಹಾಸದ ಮೊದಲ ಬಾರಿಗೆ ಬೆಳ್ಳಿ ಪದಕವನ್ನು ಪಡೆದ ಕೀರ್ತಿ ನಾರಾಯಣಸ್ವಾಮಿ ಅವರದ್ದಾಗಿದೆ. ಇದೊಂದು ಅವರ ಜೀವಮಾನದ ಮತ್ತು ಐತಿಹಾಸಿಕ ಸಾಧನೆಯಾಗಿದೆ ಎಂದು ಪ್ರಶಂಸಿಸಿದರು.

ಶಾಲೆಯ ಗಣಕಯಂತ್ರ ಶಿಕ್ಷಕಿ ವಿದ್ಯಾಶ್ರೀ, ಕನ್ನಡ ಶಿಕ್ಷಕ ರಾಜೇಂದ್ರ ಮತ್ತು ಬೆಳ್ಳಿ ಪದಕ ವಿಜೇತ ನಾರಾಯಣಸ್ವಾಮಿ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

 

 

Tags:
error: Content is protected !!