Mysore
25
scattered clouds

Social Media

ಸೋಮವಾರ, 26 ಜನವರಿ 2026
Light
Dark

40 ಕೋಟಿ ರೂ. ಮೌಲ್ಯದ ಕೊಕೇನ್ ವಶ : ಓರ್ವ ಬಂಧನ

Cocaine worth Rs 40 crore seized: One arrested

ಬೆಂಗಳೂರು : ಖಚಿತ ಗುಪ್ತಚರ ಮಾಹಿತಿಯ ಮೇರೆಗೆ ಕಾರ್ಯನಿರ್ವಹಿಸಿದ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಬೆಂಗಳೂರು ವಲಯ ಘಟಕದ ಅಧಿಕಾರಿಗಳು, ೪೦ ಕೋಟಿ ಮೌಲ್ಯದ ೪ ಕೆಜಿಗೂ ಹೆಚ್ಚು ಕೊಕೇನ್‌ನೊಂದಿಗೆ ಪುರುಷ ಪ್ರಯಾಣಿಕನನ್ನು ಬಂಧಿಸಿರುವ ಘಟನೆ ದೇವನಹಳ್ಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.

ವಶಪಡಿಸಿಕೊಂಡ ಕೊಕೇನ್ ೪,೦೦೬ ಗ್ರಾಂ (೪ ಕೆಜಿಗಿಂತ ಹೆಚ್ಚು) ತೂಕವಿದ್ದು,ಇದರ ಅಂತರರಾಷ್ಟ್ರೀಯ ಮಾರುಕಟ್ಟೆ ಮೌಲ್ಯ ಸುಮಾರು ೪೦ ಕೋಟಿ ರೂ ಎಂದು ಅಂದಾಜು ಮಾಡಲಾಗಿದೆ. ದೋಹಾದಿಂದ ಆಗಮಿಸಿದ ಆರೋಪಿಯನ್ನು ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತಡೆಹಿಡಿಯಲಾಯಿತು ಎಂದು ಹಣಕಾಸು ಸಚಿವಾಲಯದ ಪ್ರಕಟಣೆ ತಿಳಿಸಿದೆ.

ಪ್ರಯಾಣಿಕನ ಸಾಮಾನುಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಿದಾಗ, ಅತ ಎರಡು ಸೂಪರ್‌ಹೀರೋ ಕಾಮಿಕ್ಸ್/ನಿಯತಕಾಲಿಕೆಗಳನ್ನು ಹೊತ್ತೊಯ್ಯುತ್ತಿರುವುದು ಕಂಡುಬಂದಿತು. ಅವು ಅಸಾಧಾರಣವಾಗಿ ಭಾರವಾಗಿದ್ದವು. ಅಧಿಕಾರಿಗಳು ನಿಯತಕಾಲಿಕೆಗಳ ಮುಖಪುಟಗಳಲ್ಲಿ ಮುಚ್ಚಿಡಲಾಗಿದ್ದ ಬಿಳಿ ಪುಡಿಯನ್ನು ಎಚ್ಚರಿಕೆಯಿಂದ ವಶಪಡಿಸಿಕೊಂಡಿದ್ದಾರೆ.

ಪುಡಿಯಲ್ಲಿ ಕೊಕೇನ್ ಇರುವುದು ಪತ್ತೆಯಾಗಿದೆ. ವಶಪಡಿಸಿಕೊಂಡ ಕೊಕೇನ್ ೪,೦೦೬ ಗ್ರಾಂ (೪ ಕೆಜಿಗಿಂತ ಹೆಚ್ಚು) ತೂಕವಿದ್ದು, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸುಮಾರು ೪೦ ಕೋಟಿ ರೂ. ಮೌಲ್ಯದ್ದಾಗಿತ್ತು. ಇದನ್ನು ಎನ್ ಡಿಪಿಎಸ್ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ವಶಪಡಿಸಿಕೊಳ್ಳಲಾಗಿದೆ. ನಂತರ ಪ್ರಯಾಣಿಕನನ್ನು ಎನ್‌ಡಿಪಿಎಸ್ ಕಾಯ್ದೆ, ೧೯೮೫ ರ ನಿಬಂಧನೆಗಳ ಅಡಿಯಲ್ಲಿ ಬಂಧಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Tags:
error: Content is protected !!