ಕಲಬುರ್ಗಿ: ವಸತಿ ಇಲಾಖೆಯಲ್ಲಿನ ಲಂಚದ ಆಡಿಯೋ ವೈರಲ್ ಆದ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಅವರು ಶಾಸಕ ಬಿ.ಆರ್. ಪಾಟೀಲ್‌ಗೆ ಬುಲಾವ್ ನೀಡಿದ್ದಾರೆ.
ಆಡಿಯೋ ವೈರಲ್ ಆದ ಬೆನ್ನಲ್ಲೇ ಪಕ್ಷಕ್ಕೆ ಭಾರೀ ಮುಜುಗರವಾಗುತ್ತಿದ್ದಂತೆ ಎಚ್ಚೆತ್ತ ಸಿಎಂ ಸಿದ್ದರಾಮಯ್ಯ ಅವರು, ಬಿ.ಆರ್.ಪಾಟೀಲ್‌ಗೆ ಕರೆ ಮಾಡಿ ಜೂನ್.25ರ ಸಂಜೆ ಬೆಂಗಳೂರಿಗೆ ಬಂದು ಭೇಟಿ ಮಾಡುವಂತೆ ಸೂಚನೆ ನೀಡಿದ್ದಾರೆ.
ವಸತಿ ಇಲಾಖೆಯಲ್ಲಿ ಭ್ರಷ್ಟಾಚಾರದ ಬಗ್ಗೆ ಮಾತನಾಡಿದ್ದ ಪಾಟೀಲ್ ಅವರು, ಈಗ ಮೈನಾರಿಟಿ ಇಲಾಖೆಯಲ್ಲಿನ ಭ್ರಷ್ಟಾಚಾರವನ್ನು ಬಿಚ್ಚಿಟ್ಟಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಜೂನ್.25ರ ಸಂಜೆ ಬಿ.ಆರ್.ಪಾಟೀಲ್ ಅವರು ಸಿಎಂ ಸಿದ್ದರಾಮಯ್ಯರನ್ನು ಭೇಟಿಯಾಗಲಿದ್ದು, ವಸತಿ ಇಲಾಖೆಯಲ್ಲಿನ ಭ್ರಷ್ಟಾಚಾರ ವಿಚಾರ ಯಾವ ಹಂತಕ್ಕೆ ಬಂದು ತಲುಪಲಿದೆ ಎಂಬುದನ್ನು ಕಾದುನೋಡಬೇಕಿದೆ.
ಬಿ.ಆರ್. ಪಾಟೀಲರ ಸುದ್ದಿ ಗೊತ್ತಿಲ್ವಾ ನಿಮಗೆ.. ಈ ಲಿಂಕ್ ಕ್ಲಿಕ್ ಮಾಡಿ ಓದಿ ಹಾಗಾದ್ರೆ..





