ಮಂಗಳೂರು : ಸಿಎಂ ಬದಲಾವಣೆ ಬಗ್ಗೆ ಇದೇ ಮೊದಲ ಬಾರಿಗೆ ಸಿಎಂ ಸಿದ್ದರಾಮಯ್ಯ ಭಿನ್ನ ಹೇಳಿಕೆ ನೀಡಿದ್ದು, ಈತನಕ ನಾನೇ ಐದು ವರ್ಷ ಪೂರೈಸುವೆ ಎನ್ನುತಿದ್ದ ಸಿದ್ದರಾಮಯ್ಯ ಇದೀಗ ಹೈಕಮಾಂಡ್ ನತ್ತ ಬೊಟ್ಟು ಮಾಡಿದ್ದಾರೆ.
ಸೋಮವಾರ ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ವಿವಿಧ ಸಚಿವರು ಹೇಳಿಕೆ ನೀಡುತ್ತಿರುವ ಬಗ್ಗೆ ತಮ್ಮ ಅಭಿಪ್ರಾಯ ತಿಳಿಸುತ್ತಾ, ಸಿಎಂ ಸ್ಥಾನಕ್ಕೆ ಸ್ಪರ್ಧಿಸುವ ಹಕ್ಕು ಎಲ್ಲರಿಗೂ ಇದೆ. ಆದರೆ ಈ ಬಗ್ಗೆ ಅಂತಿಮ ನಿರ್ಧಾ ಹೈಕಮಾಂಡ್‌ಗೆ ಸೇರಿದ್ದಾಗಿದೆ. ನಾನೇ ಸಿಎಂ ಆಗಿ ಮುಂದುವರೆಯುವದರಲ್ಲಿಯೂ ಹೈ ತೀರ್ಮಾನವೇ ಅಂತೀಮ ಎಂದು ಹೇಳಿದ್ದಾರೆ.
ಇದನ್ನೂ ಓದಿ:-ಮೈಸೂರು | ಲಾಭದಾಸೆಗೆ ಬಿದ್ದ ಮಹಿಳೆಗೆ 1.58 ಕೋಟಿ ರೂ.ವಂಚನೆ! ಮೋಸ ಹೋಗಿದ್ದೇಗೆ?
ಇನ್ನೂ ಕಲ್ಲಡ್ಕ ಪ್ರಭಾಕರ್ ಭಟ್ ಅವರ ಭಾಷಣದ ಬಗ್ಗೆ ಪ್ರತಿಕ್ರಿಯೆ ನೀಡಿ, ಸಮಾಜದಲ್ಲಿ ಒಡಕುಂಟು ಮಾಡಿ, ದ್ವೇಷವನ್ನು ಬಿತ್ತುವ ಹಾಗೂ ಶಾಂತಿಯನ್ನು ಕದಡಲು ಪ್ರಚೋದನಾತ್ಮಕ ಭಾಷಣವನ್ನು ಯಾರೇ ಮಾಡಿದರೂ, ಅವರ ಮೇಲೆ ಪ್ರಕರಣ ದಾಖಲಿಸಲಾಗುವುದು. ದ್ವೇಷಪೂರಿತ ಭಾಷಣ ಮಾಡುವವರ ಮೇಲೆ ಎಫ್.ಐ.ಆರ್ ದಾಖಲಾಗುತ್ತದೆ. ಅವರು ಮಹಿಳೆಯರಿಗೆ ಅಗೌರವವಾಗಿ ಭಾಷಣದಲ್ಲಿ ಮಾತನಾಡಿದ್ದಾರೆ ಎಂದರು.
ಎಸ್.ಐ.ಟಿ ವರದಿ
ಧರ್ಮಸ್ಥಳ ಪ್ರಕರಣದ ಬಗ್ಗೆ ಎಸ್.ಐ.ಟಿ ವರದಿ ಸಲ್ಲಿಕೆ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸುತ್ತಾ, ಎಸ್.ಐ.ಟಿಯಲ್ಲಿ ಮಧ್ಯಪ್ರವೇಶ ಮಾಡುವುದಿಲ್ಲ. ಈ ತಿಂಗಳಾಂತ್ಯದಲ್ಲಿ ಎಸ್.ಐ.ಟಿ ವರದಿಯ ಸಲ್ಲಿಕೆಯಾಗಲಿದೆ ಎಂದು ಎಸ್.ಐ.ಟಿ ತಿಳಿಸಿರುವುದಾಗಿ ಗೃಹಸಚಿವರು ತಿಳಿಸಿರುವುದಾಗಿ ತಿಳಿಸಿದರು.
ವಾಹನ ಸೌಲಭ್ಯ
ವಾರ್ತಾ ಇಲಾಖೆಗೆ ವಾಹನ ಸೌಲಭ್ಯದ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ, ಪತ್ರಕರ್ತರ ಅನುಕೂಲಕ್ಕಾಗಿ ವಾರ್ತಾ ಇಲಾಖೆ ವಾಹನ ಒದಗಿಸುವ ಬಗ್ಗೆ ಪರಿಶೀಲಿಸಲಾಗುವುದು ಎಂದರು.





