ಬೆಂಗಳೂರು: ಬಳ್ಳಾರಿಯಲ್ಲಿ ಬಾಣಂತಿಯರ ಸರಣಿ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ಬಾಣಂತಿಯರ ಕುಟುಂಬಕ್ಕೆ ತಲಾ 2 ಲಕ್ಷ ಪರಿಹಾರ ನೀಡಲಾಗುವುದು. ಇದನ್ನು ಆಯಾ ಕಂಪೆನಿಗಳಿಂದಲೇ ಕೊಡಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಇಂದು(ನ.30) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈಗಾಗಲೇ ನಾಲ್ಕು ಮಂದಿ ಬಾಣಂತಿಯರು ಸಾವನ್ನಪ್ಪಿದ್ದಾರೆ. ಈ ಬಗ್ಗೆ ತನಿಖೆ ನಡೆಸಲು ನಮ್ಮ ಸರ್ಕಾರದ ವತಿಯಿಂದ ನಾವು ಎಕ್ಸ್‌ಪೋರ್ಟ್ ಕಮಿಟಿ ರಚಿಸಿದ್ದೇವೆ. ಅಲ್ಲದೇ ರಾಜೀವ್ ಮತ್ತು ವಾಣಿವಿಲಾಸ ಆಸ್ಪತ್ರೆ ವೈದ್ಯಾಧಿಕಾರಿಗಳ ಕಮಿಟಿ ಮಾಡಿದ್ದೇವೆ ಎಂದು ಹೇಳಿದ್ದಾರೆ.
ಈ ಪ್ರಕರಣ ಸಂಭವಿಸಲು ರಿಂಗರ್ ಲ್ಯಾಕ್ಟೇಟ್ ದ್ರಾವಣ ಬಳಕೆಯಾಗಿರುವುದು ಕಾರಣವಾಗಿದೆ. ಇದನ್ನು ಸರಬರಾಜು ಮಾಡಿದವರು ಪಶ್ಚಿಮ ಬಂಗಾಳದ ಫಾರ್ಮಾಸುಟಿಕಲ್ಸ್‌ನವರಾಗಿದ್ದಾರೆ. ಬಳಿಕ ಅದನ್ನು ಡ್ರಗ್ ಕಂಟ್ರೋಲರ್ ಸರಬರಾಜು ಮಾಡುತ್ತಾರೆ. ಹೀಗಾಗಿ ತಕ್ಷಣವೇ ಈ ಡ್ರಗ್ಸ್ ಕಂಟ್ರೋಲರ್‌ರನ್ನು ಅಮಾನತು ಆದೇಶ ನೀಡಿದ್ದು, ಆ ಕಂಪೆನಿಯನ್ನು ಬ್ಯ್ಲಾಕ್‌ಲಿಸ್ಟ್ಗೆ ಹಾಕುವಂತೆ ಹೇಳಿದ್ದೇನೆ. ಅಲ್ಲದೇ ಇಂತಹ ಘಟನೆಗಳು ಮತ್ತೊಮ್ಮೆ ಮರುಕಳಿಸದಂತೆ ಎಚ್ಚರವಹಿಸಿ ಎಂದು ಸೂಚಿಸಿದ್ದೇನೆ ಎಂದಿದ್ದಾರೆ.