ಮಂಡ್ಯ: ನಾನು ಜ್ಯೋತಿಷಿ ಅಲ್ಲ. ಆದರೆ ನವೆಂಬರ್‌ನಲ್ಲಿ ಸಿಎಂ ಬದಲಾವಣೆ ಆಗೋದು ಫಿಕ್ಸ್ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಮತ್ತೊಮ್ಮೆ ಭವಿಷ್ಯ ನುಡಿದಿದ್ದಾರೆ.
ಈ ಕುರಿತು ಮಂಡ್ಯದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿ ಪಕ್ಷದ ಅಸಮಾಧಾನ ಹಾಗೂ ಸಿಎಂ ಬದಲಾವಣೆ ಸೇರಿದಂತೆ ಅನೇಕ ವಿಷಯಗಳ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ನಾನು ಭವಿಷ್ಯ ಹೇಳೋಕೆ ಜ್ಯೋತಿಷಿ ಅಲ್ಲ. ಆದರೆ ನವೆಂಬರ್ ತಿಂಗಳಿನಲ್ಲಿ ಸಿಎಂ ಬದಲಾವಣೆ ಆಗೋದು ಫಿಕ್ಸ್ ಎಂದು ಮತ್ತೊಮ್ಮೆ ಪುನರುಚ್ಛರಿಸಿದ್ದಾರೆ.
ಇನ್ನು ಬಿಜೆಪಿ ಪಕ್ಷದ ಅಸಮಾಧಾನದ ಬಗ್ಗೆ ಮಾತನಾಡಿದ ಅವರು, ಪಕ್ಷದಲ್ಲಿ ನಡೆಯುತ್ತಿರುವ ಘಟನೆ ತುಂಬಾ ಬೇಸರ ತಂದಿದೆ. ಗುಂಪುಗಾರಿಕೆ, ಎರಡು ಬಣ ಮಾಡಿರೋದು ಒಳ್ಳೆಯದಲ್ಲ. ಇದರಿಂದ ಪಕ್ಷಕ್ಕೂ ಒಳ್ಳೆಯದಲ್ಲ. ನಾನು ಬಿಜೆಪಿ ಪಕ್ಷಕ್ಕೆ ಬಂದು 50 ವರ್ಷ ಆಗಿದೆ. ಕೇವಲ 18 ವರ್ಷ ವಯಸ್ಸಿನಲ್ಲೇ ನಾನು ಪಕ್ಷಕ್ಕೆ ಎಂಟ್ರಿ ಕೊಟ್ಟಿದ್ದೆ. ಆದ್ರೆ ಎಮರ್ಜೆನ್ಸಿಯಲ್ಲಿ ಜೈಲಿನಲ್ಲಿದ್ದೆ. ನಾನು, ನನ್ನ ಚಿಕ್ಕಪ್ಪ, ತಮ್ಮ ಎಲ್ಲರೂ ಜೈಲಿನಲ್ಲಿದ್ದೆವು. ಆದ್ದರಿಂದ ನಾವು ಆಗಿನಿಂದಲೂ ಹೋರಾಟ ಮಾಡಿಕೊಂಡೇ ಬಂದವರು. ಒಂದೇ ಬಾರಿ ಲೀಡರ್ ಆಗಿಲ್ಲ. ಹಂತ ಹಂತವಾಗಿ ಮೇಲೆ ಬಂದಿದ್ದೇನೆ ಎಂದರು.