Mysore
22
overcast clouds

Social Media

ಭಾನುವಾರ, 07 ಜೂನ್ 2026
Light
Dark

ಮುಡಾ ಕೇಸ್‌ನಲ್ಲಿ ಸಿದ್ದರಾಮಯ್ಯಗೆ ಕ್ಲೀನ್‌ಚಿಟ್‌ ಸಿಗಲಿದೆ ಎಂದ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ

ಬೆಂಗಳೂರು: ಮುಡಾ ಅಕ್ರಮ ಕೇಸ್‌ನಲ್ಲಿ ಸಿಎಂ ಸಿದ್ದರಾಮಯ್ಯರ ಅಡಿ ಇರುವ ಲೋಕಾಯುಕ್ತ ಸಂಸ್ಥೆ ಸಿಎಂಗೆ ಕ್ಲೀನ್‌ಚಿಟ್‌ ಕೊಡಲಿದೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಪರೋಕ್ಷ ಸುಳಿವು ನೀಡಿದ್ದಾರೆ.

ಈ ಬಗ್ಗೆ ಬೆಂಗಳೂರಿನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಲೋಕಾಯುಕ್ತ ತನಿಖೆಯನ್ನು ತನಿಖೆ ಎಂದು ಕರೆಯವೇಕಾ? ತನಿಖೆ ಮಾಡಿದ ಅಧಿಕಾರಿ ವರದಿ ಕೊಡೋಕೆ ಮೇಲಿನ ಅಧಿಕಾರಿ ಹತ್ತಿರ ಅನುಮತಿ ಪಡೆಯಬೇಕಂತೆ. ವರದಿ ಮೊದಲು ಮೇಲಾಧಿಕಾರಿಗಳಿಗೆ ಕೊಟ್ಟು ಮೇಲಾಧಿಕಾರಿಗಳು ಕ್ಲಿಯರ್‌ ಮಾಡಿದ ಮೇಲೆ ಇವರು ಲೋಕಾಯುಕ್ತಗೆ ವರದಿ ಕೊಡುತ್ತಾರೆ ಅಂತೆ. ಹೇಗೆ ತನಿಖೆ ಆಗಿದೆ ಎಂದು ಮೇಲಾಧಿಕಾರಿಗೆ ತೋರಿಸಿಕೊಂಡು ಮೇಲಾಧಿಕಾರಿ ಗ್ರೀನ್‌ ಸಿಗ್ನಲ್‌ ಕೊಟ್ಟ ಮೇಲೆ ವರದಿ ಕೊಡೋದಾ ಎಂದು ಪ್ರಶ್ನೆ ಮಾಡಿದರು.

 

Tags:
error: Content is protected !!