ಮಂಗಳೂರು : ಇಲ್ಲಿನ ಪಣಂಬೂರು ಎನ್‌ಎಂಪಿಟಿ ಬಂದರಿನಲ್ಲಿ ಭದ್ರತೆ ಕೆಲಸ ಮಾಡುತ್ತಿದ್ದ ಸಿಐಎಸ್‌ಎಫ್ ವಿಭಾಗದಲ್ಲಿ ಪಿಎಸ್‌ಐ ಆಗಿರುವ ಜಾಕೀರ್ ಹುಸೇನ್ (58) ತನ್ನ ಸರ್ವಿಸ್ ರಿವಾಲ್ವರ್‌ನಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಯೊಂದು ನಡೆದಿದೆ.
ರಾಯಚೂರು ಜಿಲ್ಲೆಯ ನಿವಾಸಿಗರುವ ಇವರು ರಾತ್ರಿ ಎನ್‌ಎಂಪಿಟಿ ಮೈನ್ ಗೇಟ್‌ನಲ್ಲಿ ನೈಟ್ ಶಿಫ್ಟ್‌ನಲ್ಲಿ ಕೆಲಸ ಮಾಡುತ್ತಿದ್ದರು. ಎಂದಿನಂತೆ ಇಂದು ಬೆಳಗ್ಗೆ 6.30ಕ್ಕೆ ತನ್ನ ನೈಟ್ ಶಿಫ್ಟ್ ಮುಗಿಸಿ ಬೇರೊಬ್ಬರಿಗೆ ಕೆಲವ ವಹಿಸಿ ವಾಶ್‌ರೂಂ ಗೆ ಹೋಗಿದ್ದರು. ಅಲ್ಲಿ ತನ್ನ ಸರ್ವಿಸ್ ರಿವಾಲ್ವರ್‌ನಲ್ಲಿ ತಲೆಗೆ ಗುರಿ ಇಟ್ಟುಕೊಂಡು ಗುಂಡು ಹಾರಿಸಿ ಆತ್ಮಹತ್ಯೆ ಮಾಡಿದ್ದಾರೆ.
ಈ ಘಟನೆಯ ಕುರಿತು ಪಣಂಬೂರು ಠಾಣೆಯಲ್ಲಿ ಕೇಸು ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.