Mysore
22
overcast clouds
Light
Dark

CBSC RESULT 2024: 12th ಕ್ಲಾಸ್‌ ಫಲಿತಾಂಶ ಪ್ರಕಟ: ಬಾಲಕಿಯರದ್ದೇ ಮೇಲುಗೈ

ನವದೆಹಲಿ: ಕೇಂದ್ರಿಯ ಶಾಲಾ ಪರೀಕ್ಷೆ ಮಂಡಳಿ(ಸಿಬಿಎಸ್‌ಇ)ಯ 12ನೇ ತರಗತಿ ಫಲಿತಾಂಶ ಹೊರಬಿದ್ದಿದ್ದು, ಎಂದಿನಂತೆ ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ.

ಒಟ್ಟಾರೆ ಶೇ.೮೭.೯೮ ರಷ್ಟು ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ೦.೬೫ ರಷ್ಟು ಫಲಿತಾಂಶ ಈ ಬಾರಿ ಹೆಚ್ಚಿದೆ. ಕಳೆದ ವರ್ಷ ೮೭.೩೩ ರಷ್ಟು ಫಲಿತಾಂಶ ಇತ್ತು.

ಪರೀಕ್ಷೆ ಬರೆದ ವಿದ್ಯಾರ್ಥಿಗಳಲ್ಲಿ ೯೧.೫೪ ರಷ್ಟು ಬಾಲಕಿಯರು ಉತೀರ್ಣಗೊಂಡಿದ್ದರು, ಬಾಲಕರ ಉತ್ತೀರ್ಣ ದರಕ್ಕಿಂತ ೬.೪೦ ರಷ್ಟು ಹೆಚ್ಚು ಅಂಕ ಪಡೆದಿದ್ದಾರೆ. ಒಟ್ಟಾರೆ ೨೪ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳ ಶೇ.೯೫ಕ್ಕಿಂತ ಹೆಚ್ಚಿನ ಅಂಕ ಪಡೆದರೆ, ೧.೧೬ ಲಕ್ಷ ವಿದ್ಯಾರ್ಥಿಗಳು ಶೇ ೯ಕ್ಕಿಂತ ಹೆಚ್ಚಿನ ಫಲಿತಾಂಶ ಗಳಿಸಿದ್ದಾರೆ.

ಫೆಬ್ರವರಿ ೧೫ ರಿಂದ ಏಪ್ರಿಲ್‌ ೨ರ ವರೆಗೆ ನಡೆದ ಈ ಪರೀಕ್ಷೆಯನ್ನು, ದೇಶಾದ್ಯಂತ ೭,೧೨೬ ಕೇಂದ್ರದಲ್ಲಿ ಪರೀಕ್ಷೆ ನಡೆಸಲಾಗಿತ್ತು. ಈ ವರ್ಷ ೧೬.೨೧ ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಕೇರಳದ ತಿರುವಂನತಪುರ ಅತಿ ಹೆಚ್ಚಿನ ಪಾಸಿಂಗ್‌ ಪರ್ಸೆಂಟೇಜ್‌ ೯೯.೯೧ ಹೊಂದಿದೆ. ಬೆಂಗಳೂರಿನ ಉತ್ತೀರ್ಣತೆ ಶೇ.೯೬.೯೫ ರಷ್ಟಿದೆ.

ಸಿಬಿಎಸ್ ಸಿ ಫಲಿತಾಂಶ ವೀಕ್ಷಣೆಗಾಗಿ ವಿದ್ಯಾರ್ಥಿಗಳು cbsc.gov.in ಗೆ ಭೇಟಿ ನೀಡಿ ಫಲಿತಾಂಶ ವಿಕ್ಷೀಸಬಹುದು.