Mysore
30
scattered clouds

Social Media

ಮಂಗಳವಾರ, 31 ಮಾರ್ಚ್ 2026
Light
Dark

ಜಾತಿ ಸಮೀಕ್ಷೆ | ಜಾತಿಗಣತಿ ಕಾಲಂನಲ್ಲಿ ಒಕ್ಕಲಿಗರು ಏನೆಂದು ಬರೆಸಬೇಕು : ಸಭೆಯಲ್ಲಿ ನಿರ್ಮಲಾನಂದ ಸ್ವಾಮೀಜಿ ಸಲಹೆ ಹೀಗಿದೆ

ಬೆಂಗಳೂರು : ಅಪಸ್ವರಗಳ ನಡುವೆಯೂ ಸೆಪ್ಟೆಂಬರ್​ 22 ರಿಂದ ಜಾತಿ ಗಣತಿ ಸಮೀಕ್ಷೆ ನಡೆಸಲು ಸರ್ಕಾರ ಮುಂದಾಗಿದೆ. ಈ ಸಂಬಂಧ ಆದಿ ಚುಂಚನಗಿರಿ ಮಠದ ಸ್ವಾಮೀಜಿ ನಿರ್ಮಲಾನಂದ ಅವರ ನೇತೃತ್ವದಲ್ಲಿ ಒಕ್ಕಲಿಗ ನಾಯಕರ ಮಹತ್ವದ ಸಭೆ ನಡೆಯಿತು. ಸಭೆಯಲ್ಲಿ ಸ್ವಾಮೀಜಿಗಳು ಕೆಲ ಪ್ರಮುಖ ನಿರ್ಣಯಗಳನ್ನು ತೆಗೆದುಕೊಂಡಿದ್ದಾರೆ. ಅವು ಹೀಗಿವೆ..

ಒಕ್ಕಲಿಗರ ಸಭೆಯಲ್ಲಿ ಪ್ರಮುಖ ನಿರ್ಣಯ ಹೀಗಿದೆ….

ಒಕ್ಕಲಿಗರ ಸಮುದಾಯದವರ ಮನೆಗಳಿಗೆ ಜಾತಿ ಗಣತಿ ಸಮೀಕ್ಷೆಗೆಂದು ಬಂದಾಗ ಏನೆಂದು ಬರೆಸಬೇಕು ಎಂಬ ಚರ್ಚೆ ನಡೆದಿದೆ. ಧರ್ಮದ ಕಾಲಂನಲ್ಲಿ ಹಿಂದೂ ಹಾಗೂ ಜಾತಿ ಕಾಲಂನಲ್ಲಿ ಒಕ್ಕಲಿಗ ಅಂತಷ್ಟೇ ಬರೆಸಬೇಕು ಎಂದು ನಿರ್ಧರಿಸಲಾಗಿದೆ.

ಒಕ್ಕಲಿಗ ಅಂತಾನೆ ಬರೆಸಬೇಕು
ಧರ್ಮ ಹಿಂದೂ, ಜಾತಿ ಒಕ್ಕಲಿಗ ಎಂದು ಬರೆಸಲು ನಿರ್ಣಯ ಕೈಗೊಳ್ಳಲಾಗಿದೆ. ಯಾರು ಗೊಂದಲ ಮಾಡಿಕೊಳ್ಳದಂತೆ ಸಭೆಯಲ್ಲಿ ಸ್ವಾಮೀಜಿ ಸಲಹೆ ನೀಡಿದ್ದಾರೆ. ಬಳಿಕ ಉಪಜಾತಿಯನ್ನು ಬೇಕಾದ್ರೆ ನಮೂದಿಸಿ ಕುಂಚಟಿಗ , ಮರಸು, ಸರ್ಪ, ಹಳ್ಳಿಕಾರ್ ಒಕ್ಕಲಿಗ ಅಂತ ಬರೆಸಬಹುದು. ಆದರೆ ಜಾತಿ‌ ಕಾಲಂನಲ್ಲಿ ಒಕ್ಕಲಿಗ ಅಂತ ಮಾತ್ರ ಬರೆಸಬೇಕು ಎಂಬ ನಿರ್ಣಯ ತೆಗೆದುಕೊಳ್ಳಲಾಗಿದೆ.

ಸ್ವಾಮೀಜಿ ನಿರ್ಣಯಕ್ಕೆ ನಾಯಕರ ಅನುಮೋದನೆ
ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿಗಳು ಈ ನಿರ್ಣಯಗಳನ್ನ ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಎಚ್​ಡಿ ಕುಮಾರಸ್ವಾಮಿ, ಆರ್.ಅಶೋಕ್‌, ಸದಾನಂದಗೌಡ ಸೇರಿದಂತೆ ಹಲವು ನಾಯಕರು ಅನುಮೋದಿಸಿದ್ದಾರೆ.

ನಮ್ಮದು ದೊಡ್ಡ ಸಮುದಾಯ, ಅದರಲ್ಲಿ ಉಪಪಂಗಡಗಳು ಸಹ ಇದೆ. ಮೂರು ಕಾಲಂ ಇರುತ್ತೆ. 9 ಜಾತಿ ಅಂತ ಇದೆ. ಒಕ್ಕಲಿಗ 10 ಉಪಜಾತಿ ಅಂತ ಇದೆ. ಹದಿನೈದು ದಿನಗಳು ಅವಕಾಶ ಕೊಟ್ಟಿದ್ದಾರೆ. ಜಾತಿ ಗಣತಿಗೆ ಇನ್ನೂ ಹೆಚ್ಚಿನ ದಿನಗಳು ಬೇಕು ಎಂದು ಡಿಸಿಎಂ ಡಿಕೆ ಶಿವಕುಮಾರ್‌ ಅವರಿಗೆ ನಿರ್ಮಲಾನಂದ ಸ್ವಾಮೀಜಿ ಹೇಳಿದ್ದಾರೆ.

Tags:
error: Content is protected !!