Mysore
18
overcast clouds

Social Media

ಶುಕ್ರವಾರ, 05 ಡಿಸೆಂಬರ್ 2025
Light
Dark

Caste Census | ವಿಶೇಷ ಸಭೆಯಲ್ಲಿ ಸಹೋದ್ಯೋಗಿಗಳಿಗೆ ಸಿ.ಎಂ ಹೇಳಿದ್ದೇನು?

ಬೆಂಗಳೂರು : ಜಾತಿ ಜನಗಣತಿ ವರದಿ ಬಿಡುಗಡೆ ಕುರಿತು ಚರ್ಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಇಂದು(ಏ.17)ಕರೆಯಲಾಗಿದ್ದ ವಿಶೇಷ ಸಭೆಯಲ್ಲಿ ಯಾವುದೇ ತೀರ್ಮನ ತೆಗೆದುಕೊಳ್ಳಲು ಸಚಿವ ಸಂಪುಟ ವಿಫಲವಾಗಿದೆ.

ಸುಮಾರು 2 ಗಂಟೆಗೂ ಹೆಚ್ಚು ಕಾಲ ನಡೆದ ಸಭೆಯಲ್ಲಿ ವರದಿ ಅನುಷ್ಠಾನಕ್ಕೆ ಸಂಪುಟದ ಕೆಲವು ಸಚಿವರಿಂದ ಪರ-ವಿರೋಧ ವ್ಯಕ್ತವಾಯಿತು.

ಸಿಎಂ ಹೇಳಿದ್ದೇನು?
ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಮತ್ತಷ್ಟು ಚರ್ಚಿಸೋಣ ಎಂದು ಸಿಎಂ ಹೇಳಿದ್ದಾರೆ. ಪರ ವಿರೋಧ ಅಭಿಪ್ರಾಯಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಸಂಪುಟ ಸಭೆಯಲ್ಲಿ ಸಮಗ್ರವಾಗಿ ಮತ್ತೆ ಚರ್ಚಿಸೋಣ ಅಂತ ಸಿಎಂ ಹೇಳಿದ್ದಾರೆ. ನಿಮ್ಮ ಆತಂಕ, ಗೊಂದಲಗಳು ಏನೇ ಇದ್ರೂ ಲಿಖಿತ ರೂಪದಲ್ಲಿ ಕೊಡಿ, ಅದರ ಬಗ್ಗೆ ಅಲ್ಲಿ ಚರ್ಚೆ ಮಾಡೋಣ. ಪರವೋ ವಿರೋಧವೋ ನಿಮ್ಮ ಆಕ್ಷೇಪಣೆಗಳನ್ನು ತಿಳಿಸಿ, ಸಂಕ್ಷಿಪ್ತವಾಗಿ ಸರ್ಕಾರಕ್ಕೆ ವರದಿಯನ್ನು ಸಲ್ಲಿಸಿ ಅಂತ ಸಂಪುಟ ಸಹೋದ್ಯೋಗಿಗಳಿಗೆ ಸಿಎಂ ಸೂಚಿಸಿದ್ದಾರೆ.

ಸಹೋದ್ಯೋಗಿಗಳಿಂದ ವರದಿ ಪಡೆದ ನಂತರ ಅಂತಿಮ ತೀರ್ಮಾನ ಮಾಡುವ ಭರವಸೆಯನ್ನು ಸಿದ್ದರಾಮಯ್ಯ ನೀಡಿದ್ದಾರೆ.

Tags:
error: Content is protected !!