Mysore
19
few clouds

Social Media

ಶುಕ್ರವಾರ, 06 ಫೆಬ್ರವರಿ 2026
Light
Dark

ಮೊಟ್ಟೆಯಲ್ಲಿ ಕ್ಯಾನ್ಸರ್‌ ಅಂಶ : ವರದಿ ನೀಡಲು ಸೂಚಿಸಿದ ಆರೋಗ್ಯ ಇಲಾಖೆ

Some Paracetamol Medicines Have Failed Quality Standards: Minister Dinesh Gundu Rao

ಬೆಳಗಾವಿ : ಮೊಟ್ಟೆಯಲ್ಲಿ ಕ್ಯಾನ್ಸರ್‌ಕಾರಕ ಅಂಶವಿದೆ ಎಂಬ ವಿಚಾರದ ಹಿನ್ನೆಲೆಯಲ್ಲಿ ಪರೀಕ್ಷೆ ಮಾಡಿ ವರದಿ ನೀಡಲು ಇಲಾಖೆಗೆ ಸೂಚಿಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್‌ಗುಂಡೂರಾವ್‌ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೊಟ್ಟೆಯ ಬಗ್ಗೆ ಆತಂಕ ಪಡುವುದು ಬೇಡ. ಕಳೆದ ಸೆಪ್ಟೆಂಬರ್‌, ಅಕ್ಟೋಬರ್‌ನಲ್ಲಿ 125 ಮೊಟ್ಟೆಗಳ ಮಾದರಿಯನ್ನು ಪರೀಕ್ಷೆ ಮಾಡಲಾಗಿದೆ. 123 ಮೊಟ್ಟೆಗಳ ಮಾದರಿ ಗುಣಮಟ್ಟ ಸರಿಯಿದೆ. ಒಂದೆರೆಡು ಮೊಟ್ಟೆಯ ಸ್ಯಾಂಪಲ್‌ ಮಾತ್ರ ಸರಿ ಇಲ್ಲ ಎಂದು ವರದಿ ಬಂದಿತ್ತು. ಇದರಿಂದ ಆತಂಕಕ್ಕೊಳಗಾಗುವುದು ಬೇಡ ಎಂದರು.

ಇದನ್ನು ಓದಿ: ಹವಾಮಾನ ವೈಪರೀತ್ಯ : ವಿಮಾನದಲ್ಲೇ ಸಿಲುಕಿದ್ದ ಕರ್ನಾಟಕದ 21 ಶಾಸಕರು ಮತ್ತು 7 ಸಚಿವರು

ಸಮಾಧಾನದಿಂದ ಇರೋಣ. ಮೊಟ್ಟೆ ತಗೆದುಕೊಳ್ಳುವುದು ಬೇಡ ಎಂಬ ವಿಚಾರ ಸದ್ಯಕ್ಕೆ ಬೇಡ. ಎಗ್ಗಾಸ್‌‍ ಕಂಪನಿಯ ಮೊಟ್ಟೆಯಲ್ಲಿ ಉಪಯೋಗ ಮಾಡಬಾರದಂತಹ ಆ್ಯಂಟಿಬಯೋಟಿಕ್‌ ಅಂಶದ ಮಾಹಿತಿ ಬಂದಿತ್ತು. ಅದರ ಬಗ್ಗೆ ಸ್ಪಷ್ಟವಾದ ವಿಚಾರ ತಿಳಿಯಲು ಆರೋಗ್ಯ ಇಲಾಖೆಗೆ ಸೂಚಿಸಲಾಗಿದೆ. ಗೊಂದಲವಿದ್ದರೆ ತಿಳಿದುಕೊಳ್ಳಬೇಕು. ಈಗಾಗಲೇ ಆ ಕಂಪನಿಯ ಮೊಟ್ಟೆ ಸ್ಯಾಂಪಲ್‌ಗಳನ್ನು ತೆಗೆದುಕೊಂಡಿದ್ದಾರೆ. ಪರೀಕ್ಷಿಸಿದ ನಂತರ ನಿರ್ದಿಷ್ಟ ವಿಚಾರ ತಿಳಿದುಬರಲಿದೆ. ಅಲ್ಲಿಯವರೆಗೂ ಸಮಾಧಾನದಿಂದ ಇರೋಣ. ಏಕೆಂದರೆ ಮೊಟ್ಟೆ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು ಎಂದರು.

ಅಧಿವೇಶನ ಒಂದು ವಾರದ ಕಾಲ ವಿಸ್ತರಿಸಲು ಮೊಟಕುಗೊಂಡಿದೆ ಎಂದು ಹೇಳಿದ್ದಾರೆ. ಪ್ರಸಕ್ತ ಅಧಿವೇಶನದಲ್ಲಿ ರಾಜ್ಯದ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆಯಾಗಬೇಕಿದೆ. ಬಹಳಷ್ಟು ವಿಚಾರಗಳು ಇನ್ನೂ ಬಾಕಿ ಇದ್ದು, ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಾಗಿರುವ ಹಿನ್ನೆಲೆಯಲ್ಲಿ ಈ ಅಧಿವೇಶನವನ್ನು ಇನ್ನೂ ಒಂದು ವಾರಗಳ ಕಾಲ ವಿಸ್ತರಿಸಬೇಕೆಂದು ಸಭಾಧ್ಯಕ್ಷರನ್ನು ಅವರು ಒತ್ತಾಯಿಸಿದ್ದಾರೆ.

Tags:
error: Content is protected !!