ಬೆಂಗಳೂರು: ಸಂಪುಟ ಪುನಾರಚನೆ ಆದರೆ ಮುಖ್ಯಮಂತ್ರಿ ಬದಲಾವಣೆ ಆಗಲಲ್ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಹೇಳಿದ್ದಾರೆ.
ಈ ಕುರಿತು ಬೆಂಗಳೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಪುಟ ಪುನರ್ ರಚನೆಗೆ ಅನುಮತಿ ಕೊಟ್ಟಿದ್ದಾರೆ ಎಂದು ನಾನು ಮಾಧ್ಯಮಗಳಲ್ಲಿ ನೋಡಿದ್ದೇನೆ. ಸಂಪುಟ ಪುನರ್ ರಚನೆ ಆದರೆ ಒಳ್ಳೆಯದೇ. ಬಹಳ ದಿನಗಳಿಂದ ಶಾಸಕರ ಬೇಡಿಕೆ ಇದೆ ಎಂದು ಹೇಳಿದರು.
ಸಚಿವರಾಗಬೇಕು ಎನ್ನುವ ಅಪೇಕ್ಷೆ ಹಲವರಿಗಿದೆ. ಸಂಪುಟ ಪುನಾರಚನೆ ಆದರೆ ಸಿಎಂ ಬದಲಾವಣೆ ಆಗಲ್ಲ. ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಸಮಯ ಸಂದರ್ಭ ನೋಡಿ ತೀರ್ಮಾನಿಸುತ್ತಾರೆ ಎಂದರು.
ಇನ್ನು ಕಬ್ಬಿಗೆ ದರ ನಿಗದಿ ಮಾಡುವುದು ಕೇಂದ್ರ ಸರ್ಕಾರ. ನಮ್ಮ ರೈತರು ಹೆಚ್ಚಿನ ದರ ಕೊಡಿ ಎಂದು ಕೇಳುತ್ತಿದ್ದಾರೆ. ನಾವು ಕೊಡುವುದಕ್ಕೆ ಬರುವುದಿಲ್ಲ. ಆದರೂ ಸರ್ಕಾರದಿಂದ ಪ್ರತಿ ಟನ್‌ಗೆ 50 ರೂ ಕೊಡುತ್ತೇನೆ. ಕಾರ್ಖಾನೆಗಳು 50 ರೂ ಕೊಡಲು ಒಪ್ಪಿಕೊಂಡಿವೆ. ಕಬ್ಬು ರಿಕವರಿ ಮೇಲೆ ದರ ಕೊಡಲಾಗುತ್ತದೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ಚರ್ಚೆ ಮಾಡಲು ಸಿಎಂ ಸಿದ್ದರಾಮಯ್ಯ ಸಮಯ ಕೇಳಿದ್ದಾರೆ. ಈಗ ಅವರು ಸಮಯ ಕೊಟ್ಟಿದ್ದಾರೆ ಎಂದು ಹೇಳಿದರು.





