Mysore
26
few clouds

Social Media

ಮಂಗಳವಾರ, 27 ಜನವರಿ 2026
Light
Dark

ಸಚಿವ ಸಂಪುಟ ವಿಸ್ತರಣೆಯಾಗಲಿದೆ, ನನಗೂ ಸಚಿವ ಸ್ಥಾನ ಸಿಗಲಿದೆ: ಶಾಸಕ ಪ್ರದೀಪ್‌ ಈಶ್ವರ್‌

ಚಿಕ್ಕಬಳ್ಳಾಪುರ: ರಾಜ್ಯ ಸಚಿವ ಸಂಪುಟ ವಿಸ್ತರಣೆಯಾಗಲಿದ್ದು, ನನಗೂ ಸಚಿವ ಸ್ಥಾನ ಸಿಗಲಿದೆ ಎಂದು ಶಾಸಕ ಪ್ರದೀಪ್‌ ಈಶ್ವರ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಚಿಕ್ಕಬಳ್ಳಾಪುರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಸಚಿವ ಸ್ಥಾನದ ಆಕಾಂಕ್ಷಿ. ನಾನು ಕೂಡ ಈ ಬಾರಿ ಸಚಿವನಾಗುತ್ತೇನೆ. ನನಗೂ ಮಂತ್ರಿ ಸ್ಥಾನ ನೀಡುವಂತೆ ಮನವಿ ಮಾಡುತ್ತೇನೆ. ನನಗೆ ವಿಶ್ವಾಸವಿದೆ. ನನಗೂ ಸಚಿವ ಸ್ಥಾನ ಸಿಗುತ್ತದೆ ಎಂಬುದು ನನ್ನ ಆಶಯ ಎಂದು ಹೇಳಿದರು.

ಇದನ್ನೂ ಓದಿ :-ಭೌತಶಾಸ್ತ್ರದಲ್ಲಿ 3 ವಿಜ್ಞಾನಿಗಳಿಗೆ ಒಲಿದ ನೊಬೆಲ್‌

ಇನ್ನು ನನ್ನ ಮೇಲೆ ತಾಯಿ ಚಾಮುಂಡಿದೇವಿ ಆಶೀರ್ವಾದವಿದೆ. ಸಚಿವನಾಗಿ ನಾನೂ ರಾಜಭವನಕ್ಕೆ ತೆರಳಿ ಪ್ರಮಾಣವಚನ ಸ್ವೀಕರಿಸುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Tags:
error: Content is protected !!