Mysore
21
overcast clouds
Light
Dark

ಕರ್ನಾಟಕದ ಐವರು ಸಚಿವರಿಗೆ ಬಂಪರ್: ಯಾರಿಗೆ ಯಾವ ಖಾತೆ?

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಸಂಪುಟದಲ್ಲಿ ಇದೇ ಮೊದಲ ಬಾರಿಗೆ ಕರ್ನಾಟಕದ ಐವರಿಗೆ ಸಚಿವ ಸ್ಥಾನ ಸಿಕ್ಕಿದೆ. ಅದರಲ್ಲಿ ಮೂವರಿಗೆ ಕ್ಯಾಬಿನೆಟ್‌ ದರ್ಜೆ ಸಚಿವ ಸ್ಥಾನ ಸಿಕ್ಕರೆ, ಇನ್ನುಳಿದ ಇಬ್ಬರಿಗೆ ರಾಜ್ಯ ಖಾತೆ ಸಿಕ್ಕಿದೆ.

ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ನಿರ್ಮಲ ಸೀತಾರಾಮನ್‌, ಹೆಚ್ ಡಿ ಕುಮಾರಸ್ವಾಮಿ ಹಾಗೂ ಪ್ರಹ್ಲದ್‌ ಜೋಶಿ ಅವರಿಗೆ ಕ್ಯಾಬಿನೆಟ್‌ ಖಾತೆ ಸಿಕ್ಕರೆ ವಿ.ಸೋಮಣ್ಣ ಹಾಗೂ ಶೋಭಾ ಕರಂದ್ಲಾಜೆ ಅವರಿಗೆ ರಾಜ್ಯ ಖಾತೆ ಸಿಕ್ಕಿದೆ.

ಮಂಡ್ಯ ಸಂಸದ ಎಚ್.ಡಿ ಕುಮಾರಸ್ವಾಮಿ ಅವರಿಗೆ ಉಕ್ಕು ಮತ್ತು ಬೃಹತ್ ಕೈಗಾರಿಕೆ ಖಾತೆ, ಧಾರವಾಡ ಕ್ಷೇತ್ರದ ಸಂಸದ ಪ್ರಹ್ಲಾದ್ ಜೋಶಿ ಅವರಿಗೆ ಆಹಾರ ಮತ್ತು ಗ್ರಾಹಕ ವ್ಯವಹಾರ, ನವೀಕರಿಸಬಹುದಾದ ಇಂಧನ ಖಾತೆ ಹಾಗೂ ನಿರ್ಮಲ ಸೀತಾರಾಮನ್‌ ಅವರಿಗೆ ಹಣಕಾಸು ಇಲಾಖೆ ಖಾತೆ ನೀಡಲಾಗಿದೆ.

ಬೆಂಗಳೂರು ಉತ್ತರ ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ಸಣ್ಣ, ಸೂಕ್ಷ್ಮ ಹಾಗೂ ಮಧ್ಯಮ ಕೈಗಾರಿಕೆ, ಕಾರ್ಮಿಕ ರಾಜ್ಯ ಖಾತೆ ಹಾಗೂ ತುಮಕೂರು ಸಂಸದ ವಿ.ಸೋಮಣ್ಣಗೆ ಜಲ ಶಕ್ತಿ ಹಾಗೂ ರೈಲ್ವೇ ರಾಜ್ಯ ಖಾತೆ ನೀಡಲಾಗಿದೆ.