Mysore
28
overcast clouds

Social Media

ಬುಧವಾರ, 25 ಜೂನ್ 2025
Light
Dark

ನೈಸ್ ರೋಡ್ ಟೋಲ್ ನಲ್ಲಿ ಸಂಚರಿಸುವ ಬಿಎಂಟಿಸಿ ಬಸ್ ಟಿಕೆಟ್ ದರ ಏರಿಕೆ

ಬೆಂಗಳೂರು :  ಜುಲೈ ೧ ರಿಂದ ನೈಸ್‌ ರಸ್ತೆಯ ಟೋಲ್‌ ದರ ಏರಿಕೆ ಮಾಡಿರುವ ಬೆನ್ನಲ್ಲೆ  ಬಿಎಂಟಿಸಿ ಪ್ರಯಾಣಿಕರಿಗೆ ಟಿಕೆಟ್ ದರ ಏರಿಕೆಯ ಬಿಸಿ ತಟ್ಟಿದೆ. ಈ ನೈಸ್‌ ರೋಡ್‌ ಟೋಲ್‌ ನಲ್ಲಿ ಸಂಚರಿಸುವ ಬಿಎಂಟಿಸಿ ಬಸ್‌ ಟಿಕೆಟ್‌ ದರ ಏರಿಕೆ ಮಾಡಲಾಗುತ್ತಿದೆ. ಮಾದಾವರ ಟು ಎಲೆಕ್ಟ್ರಾನಿಕ್‌ ಸಿಟಿ ಮಾರ್ಗದ ಬಿಎಂಟಿಸಿ ಬಸ್‌ ದರ ಹೆಚ್ಚಳವಾಗಲಿದೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ.

ಪ್ರತಿದಿನ ಮಾದಾವರದಿಂದ ಎಲೆಕ್ಟ್ರಾನಿಕ್‌ ಸಿಟಿಗೆ ೨೧ ಬಿಎಂಟಿಸಿ ಬಸ್‌ ಗಳು ೧೭೦ ಟ್ರಿಪ್‌ ಗಳಲ್ಲಿ ಓಡಿಸಲಾಗುತ್ತಿದ್ದು, ಪ್ರಸ್ತುತವಾಗಿ ಟಿಕೆಟ್‌ ದರ ೬೦ ರೂಪಾಯಿ ಇದೆ. ಇದರಲ್ಲಿ ಟೋಲ್‌ ದರ ೨೫ ರೂ ಸಹ ಸೇರಿದೆ. ಈ ಟೋಲ್‌ ದರ ಏರಿಕೆಯಿಂದ ೫ ರೂಪಾಯಿ ಹೆಚ್ಚಳವಾಗುವ ಸಾಧ್ಯತೆ ಇದೆ. ಬಿಎಂಟಿಸಿ ಬಸ್‌ ನೈಸ್‌ ರಸ್ತೆಯಲ್ಲಿ ಸಂಚರಿಸಲು ಒಂದು ಟ್ರಿಪ್‌ ಗೆ ೬೭೫ ರೂ ಟೋಲ್‌ ನೀಡಬೇಕಿತ್ತು. ಈಗ ಟೋಲ್‌ ದರ ಏರಿಕೆಯಾಗಿರುವುದರಿಂದ ಒಂದು ಬಸ್‌ ಟ್ರಿಪ್ ಗೆ ೭೮೫ ರೂ ಟೋಲ್‌ ಗೆ ನೀಡಲಾಗುತ್ತಿದೆ. ಅಂದರೆ ಪ್ರತಿ ಟ್ರಿಪ್ ಗೆ ೧೧೦ ರೂ ಹೆಚ್ಚಳವಾಗಿದೆ ಎಂದು ಸಾರಿಗೆ ಸಚಿವರು ಸ್ಪಷ್ಟಪಡಿಸಿದ್ದಾರೆ.

ಅಲ್ಲದೆ ನಾವು ಬಸ್‌ ದರವನ್ನು ಏರಿಕೆ ಮಾಡಿಲ್ಲ. ಆದರೆ ಟೋಲ್‌ ದರ ಏರಿಕೆಯಾಗಿರುವ ಹಿನ್ನಲೆ ನೈಸ್‌ ರೋಡ್‌ ಟೋಲ್‌ ನಲ್ಲಿ ಸಂಚರಿಸುವ ಬಸ್‌ ದರ ಏರಿಕೆಯಾಗಿದೆ. ಎಲ್ಲಿ ಟೋಲ್‌ ಸಿಗುತ್ತೋ ಅಲ್ಲಿ ಬಸ್‌ ಸೀಟುಗಳನ್ನು ಡಿವೈಡ್‌ ಮಾಡುತ್ತೇವೆ. ಟೋಲ್‌ ರೇಟ್‌ ಎಷ್ಟು ಜಾಸ್ತಿ ಮಾಡಿದ್ದಾರೆ ಅದನ್ನ ಗ್ರಾಹಕರಿಂದ ಸಂಗ್ರಹಿಸುತ್ತೇವೆ. ಬಿಎಂಟಿಸಿ ಬಸ್‌ ಗಳಿಗೆ ರಿಯಾಯಿತಿ ನೀಡಿ ಅಂತಾ ಎಂಡಿಯಿಂದ ಎರಡು ಸಲ ಪತ್ರ ಬರೆದಿದ್ದಾರೆ. ಉತ್ತರ ಬಂದಿಲ್ಲ . ಹಾಗಾಗಿ ಇದು ಬಸ್‌ ದರ ಏರಿಕೆಯಲ್ಲ, ಟೋಲ್‌ ಸೇರಿಸುತ್ತಿದ್ದೇವೆ ಅಷ್ಟೇ ಎಂದು ಹೇಳಿದರು.

Tags:
error: Content is protected !!