Mysore
18
overcast clouds

Social Media

ಶನಿವಾರ, 06 ಡಿಸೆಂಬರ್ 2025
Light
Dark

ಜನರೇ ಕಾಂಗ್ರೆಸ್‌ ಸರ್ಕಾರವನ್ನು ದಫನ್‌ ಮಾಡುವ ದಿನ ಬರುತ್ತೆ: ಸಿಟಿ ರವಿ

ಚಿಕ್ಕಮಗಳೂರು: ಅನಿಲ ದರ ಏರಿಕೆ ಮಾಡಿರುವ ಕಾಂಗ್ರೆಸ್‌ ಸರ್ಕಾರದ ನಡೆ ಕುರಿತು ರಾಜ್ಯಾದ್ಯಂತ ಸಾರ್ವಜನಿಕರು ತಮ್ಮ ಆಕ್ರೋಶ ಹೊರಹಾಕುತ್ತಿದ್ದಾರೆ. ಇತ್ತ ಚಿಕ್ಕಮಗಳೂರಿನಲ್ಲಿ ಮಾಜಿ ಶಾಸಕ ಸಿಟಿ ರವಿ ನೇತೃತ್ವದಲ್ಲಿ ಬಿಜೆಪಿ ಕೂಡಾ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದೆ.

ರಾಜ್ಯ ಸರ್ಕಾರ ಬೆಲೆ ಏರಿಕೆಯನ್ನೇ ನೀತಿ ಮಾಡಿಕೊಂಡಿದೆ. ತೈಲ ದರ ಏರಿಕೆಯಾದರೇ ಬೆಲೆ ಏರಿಕೆಗೆ ಲೈಸೆನ್ಸ್‌ ಕೊಟ್ಟಂತೆ. ಆ ಮೂಲಕ ಕಷ್ಟದಲ್ಲಿರುವ ಜನರಿಗೆ ದರ ಏರಿಕೆಯ ಬರೆ ಹಾಕಿದೆ ಎಂದು ಕಿಡಿಕಾರಿದರು.

ಮೋದಿ ಬೆಲೆ ಏರಿಕೆ ಮಾಡಿದಾಗ ಸಿಎಂ ಸಿದ್ದರಾಮಯ್ಯ ಬೈಕ್‌ ಹೊತ್ತು ಶವದ ಅಣುಕು ಯಾತ್ರೆ ಮಾಡಿದ್ದರು. ಈಗ ನಾವು ಏನು ಮಾಡಬೇಕು ಹೇಳಿ. ಜನ ವಿರೋಧಿ, ಸತ್ತು ಹೋಗಿರುವ ನಿಮ್ಮ ಸರ್ಕಾರವನ್ನೇ ಹೊತ್ತು ಹೊಗಬೇಕು. ಜನರೇ ಈ ಕಾಂಗ್ರೆಸ್‌ ಸರ್ಕಾರವನ್ನು ದಫನ್‌ ಮಾಡುವ ದಿನ ಬರುತ್ತೆ ಎಂದು ವಾಗ್ದಾಳಿ ನಡಸಿದರು.

ಕಾಂಗ್ರೆಸ್‌ಗೆ ಲೋಕಸಭಾ ಚುನಾವಣೆಯ ಸೋಲಿನ ಕಹಿಯನ್ನು ರಾಜಕೀಯ ಪಕ್ಷ, ಮುಖಂಡರ ಮೇಲೆ ತೀರಿಸಿಕೊಂಡರು. ಇದಾದ ಬಳಿಕ ಈಗ ಜನ ಸಾಮಾನ್ಯರ ಮೇಲೆ ತೀರಿಸಕೊಳ್ಳಲು ಮುಂದಾಗಿದ್ದಾರೆ.

ಜನರಿಗಾಗಿ ಏನು ಕಾರ್ಯಕ್ರಮ ನೀಡದ ಕಾಂಗ್ರೆಸ್‌, ಕೇವಲ ಜನರಿಂದ ಲೂಟಿ ಬೆಲೆ ಏರಿಕೆ ಮಾತ್ರ ಮಾಡಿದ್ದಾರೆ. ಕಾಂಗ್ರೆಸ್‌ದು ಓಲೈಕೆ ರಾಜಕಾರಣ ಎಂಬುದನ್ನು ತೋರಿಸಿಕೊಟ್ಟಿದೆ. ಆ ಮೂಲಕ ಜನ ವಿರೋಧಿ ಸರ್ಕಾರವಾಗಿ ಹೊರಹೊಮ್ಮಿದೆ ಎಂದು ಸಿಟಿ ರವಿ ವ್ಯಂಗ್ಯವಾಡಿದರು.

Tags:
error: Content is protected !!