Mysore
22
overcast clouds

Social Media

ಸೋಮವಾರ, 14 ಜುಲೈ 2025
Light
Dark

ಆಡಿಯೋ ರಿಲೀಸ್‌ ಬಳಿಕ ದೇವರಾಜೇಗೌಡರ ಬಂಧನ: ಸಿಟಿ ರವಿ

ಬೆಂಗಳೂರು: ವಕೀಲ ದೇವರಾಜೇಗೌಡ ಬಂಧನಕ್ಕೆ ಬಿಜೆಪಿ ಮುಖಂಡ ಸಿಟಿ ರವಿ ಕಾಂಗ್ರೆಸ್‌ ಸರ್ಕಾರ ವಿರುದ್ಧ ಆಕ್ರೊಶ ಹೊರಹಾಕಿದ್ದಾರೆ.

ಈ ಸಂಬಂಧ ಮಾತನಾಡಿರುವ ಅವರು, ಆಡಿಯೋ ರಿಲೀಸ್‌ ಆದ ಬಳಿಕ ಮತ್ತಷ್ಟು ಆಡಿಯೋಗಳು ಬಹಿರಂಗಗೊಳ್ಳಲಿರುವುದನ್ನು ತಡೆಯಲು ದೇವರಾಜೇಗೌಡರನ್ನು ಬಂಧಿಸಲಾಗಿದೆ.

ಎರಡನೇ ವೀಡಿಯೋ ಬಿಡುಗಡೆ ಮಾಡಿದ ಬಳಿಕ ಪೂರ್ತಿ ಆಡಿಯೋ ಬಿಡುಗಡೆಯಾದರೇ ಸರ್ಕಾರ ಪತನವಾಗಲಿದೆ ಎಂದು ದೇವರಾಜೇಗೌಡರು ಹೇಳಿಕೆ ನೀಡಿದ ಬಳಿಕವೇ ಅವರನ್ನು ಬಂಧಿಸಲಾಗಿದೆ ಎಂದು ಕಿಡಿಕಾರಿದರು.

ಪ್ರಜ್ವಲ್‌ ರೇವಣ್ಣ ಪ್ರಕರಣ ಸಂಬಂಧ ಕಾಂಗ್ರೆಸ್‌ ನವರು ರಾಜಕೀಯ ಲಾಭ ಪಡೆಯಲು ಮುಂದಾಗಿದ್ದಾರೆ. ಕಾಂಗ್ರೆಸ್‌ನಲ್ಲಿ ಯಾರು ಈ ಲಾಭ ಪಡೆಯಲು ಮುಂದಾಗಿದ್ದಾರೆ ಎಂಬುದು ಶೀಘ್ರದಲ್ಲೇ ತಿಳಿಯಲಿದೆ. ಎಸ್‌ಐಟಿ ಪ್ರಕರಣ ತನಿಖೆ ನಡೆಯುತ್ತಿದೆ. ಇದನ್ನು ಸುಪ್ರೀಂ ಕೋರ್ಟ್‌ ಅಥವಾ ಹೈಕೋರ್ಟ್‌ ನ್ಯಾಯಾಧೀಶರ ಅಧೀನದಲ್ಲಿ ತನಿಖೆಯಾಗಬೇಕು ಎಂದು ಸಿಟಿ ರವಿ ಆಗ್ರಹಿಸಿದರು.

Tags:
error: Content is protected !!