Mysore
17
broken clouds

Social Media

ಬುಧವಾರ, 15 ಜನವರಿ 2025
Light
Dark

ಬೆಂಗಳೂರಿನಲ್ಲಿ ಗಾಳಿಯ ಗುಣಮಟ್ಟ ಕುಸಿತ

ಬೆಂಗಳೂರು: ಬೆಂಗಳೂರಿನ ಬಹುಪಾಲು ಜನರು ಶೀತ, ನೆಗಡಿ ಇನ್ನಿತರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದು, ಇದಕ್ಕೆ ಈಗ ಆರಂಭವಾಗಿರುವ ಚಳಿಗಾಲದ ಶೀತ ಎಂದು ಹಲವರು ಅಂದುಕೊಂಡಿದ್ದಾರೆ. ಆದರೆ ಹೆಚ್ಚಿನ ಜನರ ಆನಾರೋಗ್ಯ ಸಮಸ್ಯೆಗೆ ಬೆಂಗಳೂರಿನ ಗಾಳಿಯ ಗುಣಮಟ್ಟ ಕುಸಿತ ಪ್ರಮುಖ ಕಾರಣವೆಂದು ತಜ್ಞರು ಅಭಿಪ್ರಾಯಪಟ್ಟದ್ದಾರೆ.

ಬೆಂಗಳೂರು ನಗರದಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಮಾನದಂಡಕ್ಕಿಂತ ನೈಟ್ರೋಜನ್‌ ಆಕ್ಸೈಡ್‌(NO2) ದುಪ್ಪಟ್ಟು ಹೆಚ್ಚಾಗಿದೆ. ಇದು ಜನರ ಆರೋಗ್ಯದ ಸಮಸ್ಯೆ ಮೇಲೆ ಪರಿಣಾಮ ಬೀರಿದೆ. ಅದರಲ್ಲೂ ಬೆಂಗಳೂರಿನ ಮೆಜೆಸ್ಟಿಕ್‌ ಅತಿ ಹೆಚ್ಚು ಮಲೀನಗೊಂಡಿರುವ ಪ್ರದೇಶವೆಂದು ʼತಜ್ಞರ ವರದಿಯಿಂದ ಬಹಿರಂಗವಾಗಿದೆ.

ಡಬ್ಲ್ಯೂಟಿಎ ಮಾನದಂಡದ ಪ್ರಕಾರ, ವರ್ಷದ 365 ದಿನಗಳಲ್ಲೂ ಪ್ರತಿ ಘನ ಮೀಟರ್‌ಗೆ ಸರಾಸರಿ 10 ಮೈಕ್ರೋಗ್ರಾಂನಷ್ಟು ನೈಟ್ರೋಜನ್‌ ಡೈ ಆಕ್ಸೈಡ್‌ ಇದ್ದರೆ ಗಾಳಿಯ ಗುಣಮಟ್ಟ ಶುದ್ಧವಾಗಿದೆ ಎಂದರ್ಥ. ಆದರೆ ಬೆಂಗಳೂರಿನಲ್ಲಿ 2023ರಲ್ಲಿ 365 ದಿನಗಳ ಪೈಕಿ 295 ದಿನಗಳಲ್ಲಿ ನೈಟ್ರೋಜನ್‌ ಮಟ್ಟ ಮೀರಿದೆ ಎಂದು ವರದಿಯಾಗಿದೆ.

ಬೆಂಗಳೂರಿನ ಕೆಲವು ಭಾಗಗಳಲ್ಲಿ ನೈಟ್ರೋಜನ್‌ ಡೈ ಆಕ್ಸೈಡ್‌ 20ಮೈಕ್ರೋಗ್ರಾಂಗಿಂತ ಹೆಚ್ಚಾಗಿ ಕಂಡುಬಂದಿದೆ. ನಗರದಲ್ಲಿ ಪರೀಕ್ಷಿಸಿದ 13 ಕೇಂದ್ರಗಳ ಪೈಕಿ 8 ಕೇಂದ್ರಗಳಲ್ಲಿ ವಾರ್ಷಿಕ ಸರಾಸರಿ ನೈಟ್ರೋಜನ್‌ ಮಟ್ಟ 20 ಮೈಕ್ರೋಗ್ರಾಂಗಿಂತಲೂ ಹೆಚ್ಚಿದೆ. ಶಿವಪುರ ಕೇಂದ್ರದಲ್ಲಿ 15 ಮೈಕ್ರೋಗ್ರಾಂಗಳಷ್ಟು ಕಂಡುಬಂದಿದ್ದರೆ, ಉಳಿದ ನಾಲ್ಕು ಕೇಂದ್ರಗಳಲ್ಲಿ 10 ರಿಂದ 13 ಮೈಕ್ರೋಗ್ರಾಂಗಳಷ್ಟು ಇರುವುದಾಗಿ ವರದಿಯಾಗಿದೆ.

ಭಾರತದಲ್ಲಿ ದೆಹಲಿ ಅತ್ಯಂತ ಕೆಟ್ಟ ಗಾಳಿಯ ಗುಣಮಟ್ಟ ಹೊಂದಿರುವ ಪ್ರದೇಶಗಳಲ್ಲಿ ಮೊದಲ ಸ್ಥಾನ ಹೊಂದಿದ್ದು, ಉಳಿದಂತೆ ಜೈಪುರ, ಪುಣೆ, ಮುಂಬೈ, ಕೋಲ್ಕತ್ತಾ, ಹೈದರಾಬಾದ್‌, ಹಾಗೂ ಚೆನ್ನೈನಲ್ಲಿಯೂ ನೈಟ್ರೋಜನ್‌ ಡೈ ಆಕ್ಸೈಡ್‌ ಮಟ್ಟ ಹೆಚ್ಚಾಗಿದೆ.

Tags: