Mysore
27
broken clouds

Social Media

ಬುಧವಾರ, 15 ಜನವರಿ 2025
Light
Dark

2022ರ ಬೆಳಗಾವಿ ಅಧಿವೇಶನ: ಇನ್ನೂ ಪಾವತಿಯಾಗಿಲ್ಲ ಶಾಸಕರು ಮತ್ತು ಸಚಿವರ ಹೋಟೆಲ್ ಬಿಲ್!

ಬೆಳಗಾವಿ: ಕಳೆದ ವರ್ಷ ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ ಶಾಸಕರು, ಅವರ ಸಿಬ್ಬಂದಿ ಮತ್ತು ಸರ್ಕಾರಿ ಅಧಿಕಾರಿಗಳಿಗೆ ವಸತಿ ಸೇವೆ ಒದಗಿಸಿದ್ದ ಹೋಟೆಲ್ ಮತ್ತು ಲಾಡ್ಜ್ ಮಾಲೀಕರ ಬಿಲ್‌ ತೆರವುಗೊಳಿಸಲು ಬೆಳಗಾವಿ ನಗರ ನಿಗಮ (ಬಿಸಿಸಿ) ಆಯುಕ್ತ ಅಶೋಕ್ ದುಗುಂಟಿ ಮುಂದಾಗಿದ್ದಾರೆ.

ಹೋಟೆಲ್ ಮತ್ತು ವಸತಿ ಮಾಲೀಕರನ್ನು ಭೇಟಿ ಮಾಡಿದ ಅವರು, ಬಿಲ್‌ಗಳನ್ನು ಪರಿಶೀಲಿಸಿದ ನಂತರ ಅವುಗಳನ್ನು ಜಿಲ್ಲಾಡಳಿತದ ಮುಂದೆ  ಇಡಲಾಗುವುದು, ನಂತರ ಅವುಗಳನ್ನು ಅನುಮೋದಿಸಲಾಗುವುದು ಎಂದು ಹೇಳಿದರು.

ಡಿಸೆಂಬರ್ 4 ರಿಂದ 15 ರ ನಡುವೆ ಸರ್ಕಾರವು ಬೆಳಗಾವಿಯ ಸುವರ್ಣಸೌಧದಲ್ಲಿ ಚಳಿಗಾಲದ ಅಧಿವೇಶನ ನಡೆಸುವ ಸಾಧ್ಯತೆಯಿದೆ. ನಗರಸಭೆ ಅಧಿಕಾರಿಗಳು ಈ ಹಿಂದೆ ಹೋಟೆಲ್ ಮತ್ತು ಲಾಡ್ಜ್ ಮಾಲೀಕರೊಂದಿಗೆ ಸಭೆ ನಡೆಸಿ, ಅಧಿವೇಶನಕ್ಕೆ ಹಾಜರಾಗುವ ಸಾರ್ವಜನಿಕ ಪ್ರತಿನಿಧಿಗಳು ಮತ್ತು ಸರ್ಕಾರಿ ಅಧಿಕಾರಿಗಳಿಗೆ ಕೊಠಡಿಗಳನ್ನು ಕಾಯ್ದಿರಿಸುವಂತೆ ಕೇಳಿದರು. ಆದರೆ 2022 ರ ಚಳಿಗಾಲದ ಅಧಿವೇಶನದ ಬಿಲ್‌ಗಳು ಇನ್ನೂ ಬಾಕಿ ಉಳಿದಿವೆ ಎಂದು ಹೋಟೆಲ್ ಮಾಲೀಕರು ದೂರಿದ್ದಾರೆ.

ಬೆಳಗಾವಿ ಹೋಟೆಲ್ ಮಾಲೀಕರ ಸಂಘದ (ಬಿಎಚ್‌ಒಎ) ಅಧ್ಯಕ್ಷ ಅಜಯ್ ಪೈ ಮಾತನಾಡಿ, ಎಷ್ಟು ಹೋಟೆಲ್‌ಗಳು ಪಾವತಿಗಳನ್ನು ಸ್ವೀಕರಿಸಿವೆ ಮತ್ತು ಎಷ್ಟು ಬಾಕಿ ಉಳಿದಿವೆ ಎಂಬ ಎಲ್ಲಾ ವಿವರಗಳನ್ನು ಒಂದು ವಾರದೊಳಗೆ ಮಾಹಿತಿ ನೀಡುವಂತೆ ಆಯುಕ್ತರು ಸಂಘಕ್ಕೆ ಸೂಚಿಸಿದ್ದಾರೆ. ನಗರದಲ್ಲಿನ ಕೆಲವು ಪ್ರಮುಖ ಹೋಟೆಲ್‌ಗಳು ಇನ್ನೂ ಬಿಎಚ್‌ಒಎ ಸದಸ್ಯರಾಗಿ ನೋಂದಾಯಿಸಿಕೊಂಡಿಲ್ಲ ಎಂದು ಅವರು ಹೇಳಿದರು.

ಬೆಳಗಾವಿ ನಗರ ಪಾಲಿಕೆಗೆ ಮಾಹಿತಿ ಸಲ್ಲಿಸಲು, ಹಾಗೂ ಬಿಎಚ್ ಒ ಸದಸ್ಯತ್ವ ನೋಂದಣಿಗೆ ಸಮಯ ನೀಡಿದ್ದು ಒಂದು ವಾರದೊಳಗೆ ವಿವರಗಳನ್ನು ಸಲ್ಲಿಸಲು ತಿಳಿಸಿದ್ದೇವೆ.  ಒಂದು ವಾರದಲ್ಲಿ  ಮಾಹಿತಿಯನ್ನು ಜಿಲ್ಲಾಡಳಿತಕ್ಕೆ ರವಾನಿಸಲಾಗುತ್ತದೆ. ಆ ಬಳಿಕವಷ್ಟೇ ಬಾಕಿ ಇರುವ  ಒಟ್ಟು ಮೊತ್ತವನ್ನು ಲೆಕ್ಕ ಹಾಕಬಹುದು ಎಂದರು. ಬಾಕಿ ಇರುವ ಬಿಲ್‌ಗಳನ್ನು ಆದಷ್ಟು ಬೇಗ ತೆರವುಗೊಳಿಸುವುದಾಗಿ ಬಿಸಿಸಿ ಅಧಿಕಾರಿಗಳು ಹೋಟೆಲ್ ಮತ್ತು ಲಾಡ್ಜ್ ಮಾಲೀಕರಿಗೆ ಭರವಸೆ ನೀಡಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ