Mysore
20
broken clouds

Social Media

ಸೋಮವಾರ, 09 ಫೆಬ್ರವರಿ 2026
Light
Dark

ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಮೂಲತಃ ಲಿಂಗಾಯತರಲ್ಲ: ಶಾಸಕ ಯತ್ನಾಳ್‌

ಬೆಂಗಳೂರು: ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಮೂಲತಃ: ಲಿಂಗಾಯತರಲ್ಲ, ಅವರೊಬ್ಬರೂ ಬಳೆಗಾರ ಶೆಟ್ಟರು ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್‌ ಆರೋಪಿಸಿದ್ದಾರೆ.

ಬೆಂಗಳೂರಿನಲ್ಲಿ ಇಂದು(ಮಾರ್ಚ್.‌4) ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಅವರು ನಾನು ವೀರಶೈವ ಲಿಂಗಾಯತರೆಂದು ಬ್ಲ್ಯಾಕ್‌ ಮೇಲ್‌ ಮಾಡುತ್ತಿದ್ದಾರೆ. ಅವರು ಲಿಂಗಾಯತ ಅಲ್ಲ, ಬಿಜೆಪಿಯ ಬ್ಲ್ಯಾಕ್‌ ಮೇಲರ್‌ ಆಗಿದ್ದಾರೆ. ನಾವು ವೀರಶೈವ ಲಿಂಗಾಯತರಿಗೆ, ಬಿಎಸ್‌ವೈ ಕರೆದ ಯಾವ ಸಭೆಗಳಿಗೆ ಹೋಗಬೇಡಿ ಎಂದು ಹೇಳುತ್ತೇವೆ. ಆದರೆ ಅವರು ಅದನ್ನು ಕೇಳದೆ ಸಭೆಗಳಲ್ಲಿ ಭಾಗವಹಿಸುತ್ತಾರೆ ಎಂದರು.

ಯಡಿಯೂರಪ್ಪ ಅವರು ರಾಜ್ಯದ ವೀರಶೈವ ಲಿಂಗಾಯತರು ಹಾಗೂ ಪಂಚಮಸಾಲಿ ಸಮುದಾಯಕ್ಕೆ ಅನ್ಯಾಯ ಮಾಡಿದ್ದಾರೆ. ಶಾಮನೂರು ಶಿವಶಂಕರಪ್ಪ ಕಾಂಗ್ರೆಸ್ ಪಕ್ಷದ ಬ್ಲಾಕ್ ಮೇಲರ್ ಆದರೆ ಯಡಿಯೂರಪ್ಪ ಬಿಜೆಪಿಯ ಬ್ಲಾಕ್ ಮೇಲರ್‌ ಆಗಿದ್ದಾರೆ. ಅವರೊಬ್ಬರು ಬಳೆಗಾರ ಶೆಟ್ಟರು ಯಾವುದೋ ಬೇರೆ ಕುಟುಂಬದವರಾಗಿದ್ದಾರೆ. ಮೂಲತಃ ಅವರ ಹುಟ್ಟೂರು ಮಂಡ್ಯ ಜಿಲ್ಲೆಯ ಕೆ.ಆರ್‌.ಪೇಟೆ ತಾಲ್ಲೂಕಿನ ಬೂಕನಕೆರೆ ಆಗಿದೆ. ಅಲ್ಲಿಗೆ ಹೋಗಿ ಕೇಳಿದರೆ, ಅವರು ಯಾವ ಸಮುದಾಯ ಎಂಬುದು ಗೊತ್ತಾಗುತ್ತದೆ ಎಂದು ಹೇಳಿದರು.

Tags:
error: Content is protected !!