Mysore
34
scattered clouds

Social Media

ಮಂಗಳವಾರ, 12 ಮೇ 2026
Light
Dark

ಬಾಣಂತಿಯರ ಸಾವು ಪ್ರಕರಣ: ಆಹಾರ ಮತ್ತು ಔಷಧ ಇಲಾಖೆ ವಿಲೀನಗೊಳಿಸಿದ ಸರ್ಕಾರ

ಬೆಂಗಳೂರು: ಬಾಣಂತಿಯರ ಸರಣಿ ಸಾವುಗಳ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯದ್ಯಾಂತ ಆಕ್ರೋಶ ವ್ಯಕ್ತವಾದ ಬಳಿಕ ಎಚ್ಚೆತ್ತ ರಾಜ್ಯ ಸರ್ಕಾರ, ಸಾರ್ವಜನಿಕರ ಆರೋಗ್ಯದ ಕಾಳಜಿಯಿಂದ ಆಹಾರ ಸುರಕ್ಷತಾ ಇಲಾಖೆ ಹಾಗೂ ಔಷಧ ನಿಯಂತ್ರಣ ಇಲಾಖೆಗಳನ್ನು ವಿಲೀನಗೊಳಿಸಿದೆ.

ಈ ಎರಡು ಇಲಾಖೆಯನ್ನು ವಿಲೀನಗೊಳಿಸಿ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಎಂದು ಹೊಸ ಮರುನಾಮಕರಣ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ರಾಜ್ಯದಲ್ಲಿ ಪರಿಶಿಷ್ಟ ಜಾತಿ-ಪಂಗಡಗಳ ಸಮುದಾಯದ ಜೊತೆಗೆ ಬಡವರ ಮೇಲಿನ ಆರೋಗ್ಯದ ದೃಷ್ಠಿಯಿಂದ ಹೆಚ್ಚು ವೆಚ್ಚ ತಗುಲುವ ಕಾಯಿಲೆಗಳಿಗೆ ಸೇವೆ ಒದಗಿಸಲು 45 ಕೋಟಿಯನ್ನು ಸರ್ಕಾರ ಮೀಸಲಿಟ್ಟಿದೆ.

ಬಳ್ಳಾರಿ ಹಾಗೂ ಬೆಳಗಾವಿ ಜಿಲ್ಲೆಯಲ್ಲಾದ ಬಾಣಂತಿಯರ ಸರಣಿ ಸಾವಿಗೆ ಇಡೀ ರಾಜ್ಯವೇ ನಲುಗಿತ್ತು. ಬೆಳಗಾವಿ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ ಕೇವಲ ಆರು ತಿಂಗಳಲ್ಲಿ 322 ಶಿಶುಗಳು ಮತ್ತು 29 ಬಾಣಂತಿಯರು ಮೃತಪಟ್ಟಿದ್ದರು. ಅಲ್ಲದೇ, ರಾಯಚೂರಿನಲ್ಲೂ ನಾಲ್ವರು ಬಾಣಂತಿಯರು ಸಾವನ್ನಪ್ಪಿದ್ದರು.

Tags:
error: Content is protected !!