ಬೆಂಗಳೂರು : ಬೆಂಗಳೂರು ಹೊರವಲಯದ ಬನ್ನೇರುಘಟ್ಟದಲ್ಲಿ ಸಫಾರಿ ವೇಳೆ ಮಹಿಳೆ ಮೇಲೆ ಚಿರತೆ ದಾಳಿ ಮಾಡಿರುವ ಘಟನೆ ಗುರುವಾರ ನಡೆದಿದೆ.
ಚೆನ್ನೆ ಮೂಲದ 50 ವರ್ಷದ ವಿವಾಹಿತ ಬಾನು ಮೇಲೆ ಚಿರತೆ ದಾಳಿ ಮಾಡಿದೆ. ಬನ್ನೇರುಘಟ್ಟ ಸಫಾರಿಗೆ ವಹಿತ ಬಾನು ಪತಿ ಮತ್ತು ಮಗನ ಜತೆ ಬಂದಿದ್ದರು. ಕೆಎಸ್‌ಟಿಡಿಸಿ ವಾಹನದಲ್ಲಿ ಸಫಾರಿಗೆ ತೆರಳಿದ ವಾಹನದ ಗ್ಲಾಸ್ ಓಪನ್ ಮಾಡಿ ನೋಡುತ್ತಿದ್ದರು. ಈ ವೇಳೆ ವಾಹನದ ಮೇಲೆ ಎಗರಿದ ಚಿರತೆ ವಹಿತ ಬಾನು ಕೈಗೆ ಪರಚಿದೆ.
ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.





