Mysore
25
broken clouds

Social Media

ಬುಧವಾರ, 06 ಮೇ 2026
Light
Dark

ಇಂದಿನಿಂದ ಬಂಡೀಪುರ-ನಾಗರಹೊಳೆ ಸಫಾರಿ ಪುನರಾರಂಭ: ಅರಣ್ಯ ಸಚಿವರಿಂದ ಕಟ್ಟುನಿಟ್ಟಿನ ಆದೇಶಗಳು

ಬೆಂಗಳೂರು: ರೈತರ ವಿರೋಧದ ನಡುವೆಯೂ ಇಂದಿನಿಂದ ಬಂಡೀಪುರ ಹಾಗೂ ನಾಗರಹೊಳೆಯಲ್ಲಿ ಸಫಾರಿ ಪುನರಾರಂಭ ಮಾಡಲಾಗಿದೆ.

ಕಾಡಂಚಿನ ಗ್ರಾಮಗಳಲ್ಲಿ ಹುಲಿ ದಾಳಿಗೆ ರೈತರು ಹಾಗೂ ಜಾನುವಾರುಗಳು ಬಲಿಯಾಗುತ್ತಿದ್ದ ಹಿನ್ನೆಲೆಯಲ್ಲಿ ಕಳೆದ ಮೂರು ತಿಂಗಳಿನಿಂದ ಸಫಾರಿ ಸ್ಥಗಿತಗೊಳಿಸಲಾಗಿತ್ತು.

ಆದರೆ ಈಗ ಕಾಡು ಪ್ರಾಣಿಗಳ ಹಾವಳಿ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಇಂದಿನಿಂದ ಸಫಾರಿ ಆರಂಭಿಸಲಾಗಿದೆ.

ಪರ ವಿರೋಧದ ನಡುವೆ ಇಂದಿನಿಂದ ಷರತ್ತು ಬದ್ದ ನಿಬಂಧನೆಗಳೊಂದಿಗೆ ಸಫಾರಿ ಆರಂಭಿಸಲಾಗಿದ್ದು, ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ಕೆಲ ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ.

ತಾಂತ್ರಿಕ ಸಮಿತಿ ಸಲ್ಲಿಸಿದ್ದ ವರದಿ ಆಧರಿಸಿ ಷರತ್ತು ಬದ್ಧ ನಿಬಂಧನೆಗಳನ್ನು ಪಾಲಿಸಲು ಸೂಚನೆ ನೀಡಲಾಗಿದ್ದು, ಸಫಾರಿ ಮಾರ್ಗಗಳ ಮರು ಪರಿಶೀಲನೆ, ವಾಹನಗಳ ಸಂಖ್ಯೆ ಮಿತಿಗೊಳಿಸುವುದು, ಸಮಯ ನಿಯಂತ್ರಣ ಸೇರಿದಂತೆ ಹಲವು ಷರತ್ತುಗಳನ್ನು ಹೇರಲಾಗಿದೆ.

ಸಫಾರಿಯಿಂದ ಕಾಡಿನಿಂದ ನಾಡಿಗೆ ಪ್ರಾಣಿಗಳು ಬರುತ್ತವೆ ಎಂಬುದು ರೈತರ ವಾದವಾಗಿದ್ದು, ಸಫಾರಿ ಆರಂಭದಿಂದ ಸ್ಥಳೀಯರಿಗೆ ಸಂತಸ ಮನೆ ಮಾಡಿದೆ.

ಸಫಾರಿ ಆರಂಭದಿಂದ ಸ್ಥಳೀಯ ಯುವಕರಿಗೆ ಉದ್ಯೋಗ, ಹೋಟೆಲ್, ಲಾಡ್ಜ್, ಹೋಂಸ್ಟೇಗಳಲ್ಲಿ ಉತ್ತಮ ವ್ಯಾಪಾರ ವಹಿವಾಟು, ಸಣ್ಣ ಪುಟ್ಟ ವ್ಯಾಪಾರಿಗಳಿಗೆ ಅನುಕೂಲವಾಗಲಿದೆ. ಈ ಹಿನ್ನೆಲೆಯಲ್ಲಿ ಎಲ್ಲವನ್ನೂ ಪರಿಗಣಿಸಿ ಸಫಾರಿ ಪುನರಾರಂಭಕ್ಕೆ ಅನುಮತಿ ನೀಡಲಾಗಿದೆ.

Tags:
error: Content is protected !!