Mysore
25
overcast clouds
Light
Dark

ನೀವು ಎವರೆಸ್ಟ್‌ ಚಿಕನ್‌ ಮಸಾಲಾ ಬಳಸುತ್ತಿದ್ದೀರಾ? ಹಾಗಿದ್ದರೆ ಈ ಸುದ್ದಿ ಓದಿ

ಉತ್ತರ ಕನ್ನಡ: ಎವರೆಸ್ಟ್‌ ಚಿಕನ್‌ ಮಸಾಲಾದಲ್ಲಿ ಅಸುರಕ್ಷಿತ ರಾಸಾಯನಿಕ ಪ್ರಮಾಣ ಹೆಚ್ಚಿದ್ದು, ಇದನ್ನು ಬಳಸದಂತೆ ಉತ್ತರ ಕನ್ನಡ ಜಿಲ್ಲಾ ಆಹಾರ ಸುರಕ್ಷತಾ ಅಧಿಕಾರಿ ರಾಜಶೇಖರ್‌ ಸೂಚನೆ ನೀಡಿದ್ದಾರೆ.

ಎವರೆಸ್ಟ್‌ ಚಿಕನ್‌ ಮಸಾಲಾದಲ್ಲಿ ಮೆಣಸಿನಪುಡಿಗೆ ಬಳಸುವ ಕೀಟನಾಶಕ ಎಥಿಲಿನ್‌ ಆಕ್ಸೈಡ್‌ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿದ್ದು, ಇದನ್ನು ಬಳಸಿದರೆ ಆರೋಗ್ಯದ ಮೇಲೆ ಪರಿಣಾಮ ಆಗಿಯೇ ಆಗುತ್ತದೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಸಾಮಾನ್ಯವಾಗಿ ಮಸಾಲಾ ಪದರ್ಥದಲ್ಲಿ ಎಥಿಲಿನ್‌ ಪ್ರಮಾಣ ಕೇವಲ ಶೇ.0.01ರಷ್ಟು ಇರಬೇಕು. ಆದರೆ ಎವರೆಸ್ಟ್‌ ಚಿಕಿನ್‌ ಮಸಾಲಾದಲ್ಲಿ ಈ ಪ್ರಮಾಣ ಶೇ.3.93ರಷ್ಟಿದೆ. ಇಷ್ಟೊಂದು ಪ್ರಮಾಣದ ಎಥಿಲಿನ್‌ ಆಕ್ಸೈಡ್‌ ಬಳಕೆ ಯೋಗ್ಯವಲ್ಲ, ಇದು ಹಾನಿಕಾರಿಕ ಎಂದು ಆಹಾರ ಸುರಕ್ಷತಾ ಅಧಿಕಾರಿ ರಾಜಶೇಖರ್ ಹೇಳಿದರು.

ಎವರೆಸ್ಟ್‌ ಚಿಕನ್‌ ಮಸಾಲಾ ಬಗ್ಗೆ ಆಹಾರ ಇಲಾಖೆಗೆ ಅನುಮಾನ ಇತ್ತು. ಈ ಬಗ್ಗೆ ಇಲಾಖೆ ಆಯುಕ್ತರ ಸೂಚನೆ ಮೇರೆಗೆ ಎವರೆಸ್ಟ್‌ ಮಸಾಲಾವನ್ನು ಪರೀಕ್ಷೆ ಮಾಡಿದಾಗ, ಶೇ.3.93 ರಷ್ಟು ರಾಸಾಯನಿಕ ಪ್ರಮಾಣ ಇರುವುದು ಕಂಡು ಬಂದಿದೆ. ಆಗಾಗಿ ಸಾರ್ವಜನಿಕರು ಈ ಚಿಕನ್‌ ಮಸಾಲಾವನ್ನು ಬಳಸಬಾರದು ಎಂದು ಮನವಿ ಮಾಡಿದರು.

ಹೀಗಾಗಲೇ ಎವರೆಸ್ಟ್‌ ಚಿಕನ್‌ ಮಸಾಲಾ ಕಂಪನಿಗೆ ನೋಟಿಸ್‌ ನೀಡಿದ್ದೇನೆ. ಕಂಪನಿ ಸರಬರಾಜು ನಿಲ್ಲಿಸಬೇಕು ಎಂದಿದ್ದೇವೆ. ಈಗಾಗಲೇ ಅಂಗಡಿಗಳಿಗೆ ಪೂರೈಸಿದ್ದರೇ ಹಿಂಪಡೆಯುವಂತೆ ಸೂಚಿಸಿದ್ದೇವೆ ಎಂದರು.

ಇದು ಕೇವಲ ಕರ್ನಾಟಕದಲ್ಲಿ ಮಾತ್ರ ಅಲ್ಲ ಇಡೀ ದೇಶದಲ್ಲಿಯೇ ಸರಬರಾಜು ನಿಲ್ಲಿಸಲು ಸೂಚಿಸಿದ್ದೇವೆ. ಸಾರ್ವಜನಿಕರು ಎವರೆಸ್ಟ್‌ ಚಿಕನ್‌ ಮಸಾಲಾ ಖರೀದಿಸಿದ್ದರೆ ಅಂಗಡಿಗಳಿಗೆ ವಾಪಸ್‌ ನೀಡಿ, ಕಂಪನಿ ಈಗಾಗಲೇ ಮಸಾಲಾ ಪೌಡರ್‌ ಪ್ಯಾಕೆಟ್‌ಗಳನ್ನು ಹಿಂಪಡೆಯುವ ಕೆಲಸ ಮಾಡುತ್ತಿದೆ. ಅಲ್ಲದೇ ಕಂಪನಿ ವಿರುದ್ಧ ಪ್ರಕರಣ ಸಹ ದಾಖಲು ಮಾಡುತ್ತೇವೆ ಎಂದು ತಿಳಿಸಿದರು.

ಇನ್ನು ಎವರೆಸ್ಟ್‌ ಚಿಕನ್‌ ಮಸಾಲಾ ಅಲ್ಲದೇ ೧೫ ತರಹದ ಮಸಾಲಾ ಪೌಡರ್‌ಗಳನ್ನು ಪರೀಕ್ಷೆಗೆ ಕಳುಹಿಸಿ ವರದಿಗಾಗಿ ಕಾಯುತ್ತಿದ್ದೇವೆ. ಆದರೆ ಎಂಟಿಆರ್‌ ಮಸಾಲಾ ಪೌಡರ್‌ಗಳನ್ನು ಇದುವರೆಗೂ ಪರೀಕ್ಷೆ ಮಾಡಿಲ್ಲ ಎಂದರು.