ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ನಟ ದರ್ಶನ್‌ಗೆ ಮತ್ತಷ್ಟು ಕಠಿಣ ಶಿಕ್ಷೆ ಶುರುವಾಗಿದೆ.
ಬ್ಯಾರಕ್‌ನಲ್ಲಿ ಕೂರಿಸಿ ಊಟ ಕೊಡುತ್ತಿದ್ದ ಜೈಲಿನ ಅಧಿಕಾರಿಗಳು ಈಗ ಸರತಿ ಸಾಲಿನಲ್ಲಿ ನಿಲ್ಲುವಂತೆ ಮಾಡಿದ್ದಾರೆ. ಜೈಲು ಅಧೀಕ್ಷಕರಾಗಿ ನೇಮಕವಾಗಿರುವ ಅಂಶಕುಮಾರ್ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿದ್ದಾರೆ.
ಇಷ್ಟು ದಿನ ಬ್ಯಾರಕ್‌ನಲ್ಲಿ ಊಟ ಪಡೆದುಕೊಳ್ಳುತ್ತಿದ್ದ ದರ್ಶನ್ ಎಲ್ಲಾ ಆರೋಪಿಗಳಂತೆ ಸರತಿ ಸಾಲಿನಲ್ಲಿಯೇ ನಿಂತು ಊಟ ಪಡೆಯುವ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ.
ಜೈಲು ಅಧೀಕ್ಷಕರು ಎಲ್ಲಾ ಕೈದಿಗಳಿಗೂ ಒಂದೇ ನಿಯಮ ಜಾರಿ ಮಾಡಿದ್ದಾರೆ. ಇದರಿಂದಾಗಿ ದರ್ಶನ್ ಬ್ಯಾರಕ್‌ನಿಂದ ಹೊರಗೆ ಬಂದು ಎಲ್ಲರಂತೆ ಊಟ ಪಡೆದುಕೊಂಡು ಊಟ ಮುಗಿಸಿ ಬ್ಯಾರಕ್‌ಗೆ ಹೋಗಬೇಕಿದೆ ಎಂದು ಹೇಳಲಾಗಿದೆ.





