ಬೆಂಗಳೂರು: ನಟ ದರ್ಶನ್ ಅಂಡ್ ಗ್ಯಾಂಗ್‌ಗೆ ಮತ್ತೊಂದು ಶಾಕ್ ಎದುರಾಗಿದ್ದು, ಆರೋಪಿಗಳಿಂದ ವಶಪಡಿಸಿಕೊಂಡಿದ್ದ 82 ಲಕ್ಷ ಹಣವನ್ನು ಐಟಿ ಇಲಾಖೆ ವಶಕ್ಕೆ ನೀಡಿ ಕೋರ್ಟ್ ಆದೇಶ ಹೊರಡಿಸಿದೆ.
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಗಳಿಂದ ವಶಪಡಿಸಿಕೊಂಡಿದ್ದ 82 ಲಕ್ಷ ಹಣವನ್ನು ಐಟಿ ವಶಕ್ಕೆ ನೀಡಲಾಗಿದೆ.
ಇದನ್ನು ಓದಿ: ಜೈಲಿನಲ್ಲಿರುವ ದರ್ಶನ್‌ಗೆ ಮತ್ತೊಂದು ಶಾಕ್: ಏನದು ಗೊತ್ತಾ?
ಅರ್ಜಿ ಪುರಸ್ಕರಿಸಿದ ಬೆಂಗಳೂರಿನ 57ನೇ ಸಿಸಿಎಚ್ ನ್ಯಾಯಾಲಯ 82 ಲಕ್ಷ ಹಣವನ್ನು ಐಟಿ ಇಲಾಖೆ ವಶಕ್ಕೆ ನೀಡಿದೆ.
ಆದಾಯ ತೆರಿಗೆ ಇಲಾಖೆ ಮುಂದೆ ನಟ ದರ್ಶನ್ ತಕರಾರು ಅರ್ಜಿ ಸಲ್ಲಿಸಬಹುದು. ಐಟಿ ಹಣ ಬಿಡುಗಡೆ ಮಾಡಿದರೆ ದರ್ಶನ್ ಹಣ ಪಡೆಯಬಹುದು ಎಂದು ನ್ಯಾಯಾಲಯ ಹೇಳಿದೆ.





