ಬೆಂಗಳೂರು: ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಮತ್ತೊಂದು ವಿವಾದ ಸೃಷ್ಟಿಸಿದ್ದು, ಸಾರ್ವಜನಿಕ ಸ್ಥಳದಲ್ಲಿ ಅಸಭ್ಯ ಸನ್ನೆ ತೋರಿಸಿದ ಘಟನೆ ನಡೆದಿದೆ.
ಬೆಂಗಳೂರಿನಲ್ಲಿ ನವೆಂಬರ್.28ರಂದು ಈ ಘಟನೆ ನಡೆದಿದೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದ್ದು, ವ್ಯಾಪಕ ಟೀಕೆಗೆ ಗುರಿಯಾಗಿದೆ.
ಜೈದ್ ಖಾನ್, ಮೊಹಮ್ಮದ್ ನಲಪಾಡ್ ಜೊತೆ ಆರ್ಯನ್ ಬೆಂಗಳೂರಿನ ಪಬ್‌ಗೆ ಬಂದಿದ್ದನು ಎನ್ನಲಾಗಿದೆ.
ಪಬ್‌ನಲ್ಲಿ ಮಿಡಲ್ ಫಿಂಗರ್ ತೋರಿಸಿ ಸಾರ್ವಜನಿಕವಾಗಿ ದುರ್ವರ್ತನೆ ತೋರಿಸಿದ್ದು, ವಿವಾದಕ್ಕೆ ಕಾರಣವಾಗಿದೆ. ಅಶೋಕನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಅಭಿಮಾನಿಗಳತ್ತ ಕೈ ಬೀಸುವಾಗ ಶಾರುಖ್ ಖಾನ್ ಪುತ್ರ ಮಿಡಲ್ ಫಿಂಗರ್ ತೋರಿಸುವಾಗ ಅಸಭ್ಯ ವರ್ತಿಸಿದ್ದಾರೆ. ಸದ್ಯಕ್ಕೆ ದೂರು ದಾಖಲಾಗಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.





