ಹುಬ್ಬಳ್ಳಿ: ನೇಹ ಹಿರೇಮಠ ಹಾಗೂ ಅಂಜಲಿ ಅಂಬಿಗೇರೆ ಹತ್ಯೆ ಪ್ರಕರಣಗಳನ್ನು ಹುಬ್ಬಳ್ಳಿ ಜನತೆ ಇನ್ನೂ ಮರೆತಿಲ್ಲ. ಈ ನಡುವೆ ಇದೀಗ ಮತ್ತೊಂದು ಕೊಲೆ ನಡೆದಿದ್ದು, ಹುಬ್ಬಳ್ಳಿ ಜನತೆ ಬೆಚ್ಚಿ ಬಿದ್ದಿದ್ದಾರೆ.
ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನನ್ನು ಕೊಲೆ ಮಾಡಿದ ಘಟನೆ ಲೋಹಿಯಾ ನಗರದಲ್ಲಿ ನಡೆದಿದೆ. ಆಕಾಶ್ ಮಠಪತಿ(26) ಕೊಲೆಯಾದ ಯುವಕ. ಮೃತ ಯುವಕ ಉತ್ತರ ಕರ್ನಾಟಕ ಆಟೋ ಚಾಲಕರ ಸಂಘದ ಅಧ್ಯಕ್ಷ ಶೇಖರಯ್ಯ ಮಠಪತಿ ಅವರ ಪುತ್ರನಾಗಿದ್ದಾರೆ.
ಶನಿವಾರ ಸಂಜೆ(ಜೂ.22) ಹಳೇ ದ್ವೇಷದ ಹಿನ್ನೆಲೆ ಮದ್ಯ ಕುಡಿಸಿ ದುಷ್ಕರ್ಮಿಗಳಿಂದ ಕೊಲೆ ಮಾಡಲಾಗಿದೆ. ಸ್ಥಳಕ್ಕೆ ಹುಬ್ಬಳ್ಳಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.