Mysore
18
overcast clouds

Social Media

ಶುಕ್ರವಾರ, 05 ಡಿಸೆಂಬರ್ 2025
Light
Dark

ಕ್ರಾಂತಿ ಎಲ್ಲಾ ʻಮಾಧ್ಯಮ ಸೃಷ್ಟಿʼ : ಸಿ.ಎಂ ಸಿಡಿಮಿಡಿ

ಬೆಂಗಳೂರು : ನವೆಂಬರ್ ಕ್ರಾಂತಿಯ ವರದಿಗಳನ್ನು ಸ್ಪಷ್ಟವಾಗಿ ತಳ್ಳಿಹಾಕಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದು ಕೇವಲ ಮಾಧ್ಯಮ ಸೃಷ್ಟಿ ಎಂದು ಗುರುವಾರ ಹೇಳಿದ್ದಾರೆ.

ನನ್ನ ಸ್ಥಾನ ಮೊದಲಿನಿಂದಲೂ ಗಟ್ಟಿಯಾಗಿದೆ. ಈಗಲೂ ಗಟ್ಟಿಯಾಗಿದೆ ಮತ್ತು ಭವಿಷ್ಯದಲ್ಲಿಯೂ ಹಾಗೆಯೇ ಮುಂದುವರಿಯುತ್ತದೆ ಎಂದು ಸಿ.ಎಂ ಸಿದ್ದರಾಮಯ್ಯ ಒತ್ತಿ ಹೇಳಿದರು.

ನಾಯಕತ್ವ ಬದಲಾವಣೆ ಕುರಿತ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿಎಂ, ಎರಡೂವರೆ ವರ್ಷ ಆದಮೇಲೆ ಸಂಪುಟ ಪುನಾರಚನೆ ಮಾಡೋಣ ಅಂದಿದ್ದೆ, ಆ ವಿಚಾರದ ಬಗ್ಗೆ ಸಾಕಷ್ಟು ಚರ್ಚೆ ಆಗುತ್ತಿದೆ. ಅದಕ್ಕೆ ಎಲ್ಲರೂ ಕ್ರಾಂತಿ ಅಂತ ತಿಳಿದುಕೊಂಡಿದ್ದರು. ಆದರೆ ಯಾವ ಕ್ರಾಂತಿಯೂ ಇಲ್ಲ, ಭ್ರಾಂತಿಯೂ ಇಲ್ಲ. ಮತ್ತೆ ರಾಜ್ಯದಲ್ಲಿ ನಾವೇ ಅಧಿಕಾರಕ್ಕೆ ಬರುತ್ತೇವೆ, ಎಲ್ಲಿಯತನಕ ಜನರ ಆಶೀರ್ವಾದ ಇರುತ್ತೆ, ಅಲ್ಲಿ ತನಕ ನಾನೇ ಸಿಎಂ ಆಗಿರುತ್ತೇನೆ ಎಂದರು.

ಇದನ್ನೂ ಓದಿ:-ಕ್ರಾಂತಿ ಎಲ್ಲಾ ʻಮಾಧ್ಯಮ ಸೃಷ್ಟಿʼ : ಸಿ.ಎಂ ಸಿಡಿಮಿಡಿ

2028ರ ಚುನಾವಣೆಯಲ್ಲಿ ಯಾರ ನೇತೃತ್ವದಲ್ಲಿ ಚುನಾವಣೆ ಎದುರಿಸಬೇಕು ಎಂಬ ವಿಚಾರವನ್ನು ಮುಂದಿನ ದಿನಗಳಲ್ಲಿ ತೀರ್ಮಾನ ಮಾಡೋಣ ಎಂದು ಸಿಎಂ ತಿಳಿಸಿದರು.

ಐದು ವರ್ಷಗಳ ಕಾಲ ನೀವೇ ಸಿಎಂ ಆಗಿ ಇರುತ್ತೀರಾ? ಎಂಬ ಪ್ರಶ್ನೆಗೆ ಸಿಡಿಮಿಡಿಗೊಂಡ ಸಿಎಂ, “ಇದರ ಅರ್ಥವೇನು? ಇವು ಅನಗತ್ಯ ಚರ್ಚೆಗಳು. ಎರಡೂವರೆ ವರ್ಷದ ನಂತರ ಸಂಪುಟ ಪುನರ್ರಚನೆ ಮಾಡೋಣ ಅಂತ ನಾನು ಪಕ್ಷದ ಹೈಕಮಾಂಡ್‌ಗೆ ಹೇಳಿದ್ದೆ. ಅದರ ನಂತರವೇ ಅಧಿಕಾರ ಹಂಚಿಕೆಯ ಕುರಿತು ಈ ಚರ್ಚೆಗಳು ಪ್ರಾರಂಭವಾದವು” ಎಂದರು.

ಇದೇ ವೇಳೆ ಸಂಪುಟ ಪುನರ್ರಚನೆಯ ದಿನಾಂಕವನ್ನು ನಿಗದಿಪಡಿಸಲಾಗಿದೆಯೇ ಎಂದು ಕೇಳಿದಾಗ, ಈ ಬಗ್ಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ರಾಹುಲ್ ಗಾಂಧಿ ಅವರೊಂದಿಗೆ ಚರ್ಚೆ ನಡೆಸುತ್ತಿದ್ದಾರೆ ಎಂದು ಹೇಳಿದರು.

Tags:
error: Content is protected !!