Mysore
19
clear sky

Social Media

ಗುರುವಾರ, 29 ಜನವರಿ 2026
Light
Dark

ನಟಿ ಮೇಲೆ ಅತ್ಯಾಚಾರ ಕೇಸ್‌: ಮಲಯಾಳಂ ಸ್ಟಾರ್‌ ನಟ ದಿಲೀಪ್‌ ಖುಲಾಸೆ

malayalam actress

ಕೇರಳ: ಸುಮಾರು ಎಂಟು ವರ್ಷಗಳ ಕಾಲ ನಡೆದ ಕಾನೂನು ಹೋರಾಟದ ನಂತರ, 2017ರಲ್ಲಿ ನಟಿಯ ಮೇಲಿನ ಹಲ್ಲೆ ಪ್ರಕರಣದಲ್ಲಿ ಮಲಯಾಳಂ ನಟ ದಿಲೀಪ್‌ ಅವರನ್ನು ಕೇರಳ ನ್ಯಾಯಾಲಯ ಇಂದು ದೋಷಮುಕ್ತ ಎಂದು ಘೋಷಣೆ ಮಾಡಿದೆ.

ಆದರೆ ನ್ಯಾಯಾಧೀಶರು ಒಂದಿನಿಂದ ಆರು ಮಂದಿ ಆರೋಪಿಗಳ ವಿರುದ್ಧ ಅತ್ಯಾಚಾರ, ಕ್ರಿಮಿನಲ್‌ ಪಿತೂರಿ, ಅಪಹರಣ ಹಾಗೂ ಇತರೆ ಅಪರಾಧಗಳನ್ನು ಎಸಗಿದ್ದಾರೆ ಎಂದು ಘೋಷಿಸಿದ್ದಾರೆ. ಅವರನ್ನು ಭಾರತೀಯ ದಂಡ ಸಂಹಿತೆಯಡಿಯಲ್ಲಿ ಕ್ರಿಮಿನಲ್‌ ಪಿತೂರಿ, ಅಕ್ರಮ ಬಂಧನ, ದೌರ್ಜನ್ಯಕ್ಕೆ ಒಳಗಾದ ಹಲ್ಲೆ, ಅಪಹರಣ, ವಿವಸ್ತ್ರಗೊಳ್ಳಲು ಯತ್ನಿಸುವುದು ಹಾಗೂ ಸಾಮೂಹಿಕ ಅತ್ಯಾಚಾರದ ಆರೋಪಗಳನ್ನು ಹೊರಿಸಲಾಯಿತು.

ಎರ್ನಾಕುಲಂ ಜಿಲ್ಲಾ ಹಾಗೂ ಪ್ರಧಾನ ಸೆಷನ್ಸ್‌ ನ್ಯಾಯಾಧೀಶ ಹನಿ ಎಂ ವರ್ಗೀಸ್‌ ಅವರು ಬೆಳಿಗ್ಗೆ 11 ಗಂಟೆಗೆ ತೀರ್ಪು ಪ್ರಕಟಿಸಿದರು.

Tags:
error: Content is protected !!