Mysore
23
overcast clouds

Social Media

ಭಾನುವಾರ, 17 ಮೇ 2026
Light
Dark

ನಟ ದರ್ಶನ್‌ ಮತ್ತೊಮ್ಮೆ ಪೊಲೀಸ್‌ ಕಸ್ಟಡಿಗೆ; ಪರಪ್ಪನ ಅಗ್ರಹಾರ ಸೇರಿದ ಪವಿತ್ರ ಗೌಡ

ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ ಹಾಗೂ ಗ್ಯಾಂಗ್‌ಗೆ ಮತ್ತೆ ಸಂಕಷ್ಟ ಎದುರಾಗಿದ್ದು, ನಟ ದರ್ಶನ್‌ರನ್ನು ಮತ್ತೆ ಪೊಲೀಸ್ ಕಸ್ಟಡಿಗೆ ಹಾಗೂ ಎ1 ಆರೋಪಿ ಪವಿತ್ರ ಗೌಡಗೆ ನ್ಯಾಯಂಗ ಬಂಧನ ನೀಡಿ ಕೋರ್ಟ್‌ ಆದೇಶ ನೀಡಿದೆ.

ದರ್ಶನ್‌ ಹಾಗೂ ಗ್ಯಾಂಗ್‌ನ ಪೊಲೀಸ್‌ ಕಸ್ಟಡಿ ಇಂದು(ಜೂ.20) ಅಂತ್ಯವಾದ ಹಿನ್ನಲೆಯಲ್ಲಿ ಎಲ್ಲಾ ಆರೋಪಿಗಳನ್ನು ಕೋರ್ಟ್‌ಗೆ ಹಾಜರು ಪಡಿಸಲಾಗಿತ್ತು. ಕೋರ್ಟ್‌ನಲ್ಲಿ ಹಾಜರಾದ ಆರೋಪಿಗಳನ್ನು ನ್ಯಾಯಾಧೀಶ ವಿಶ್ವನಾಥ್‌ ಸಿ.ಗೌಡ ಅವರು ವಿಚಾರಣೆ ನಡೆಸಿದರು.

ದರ್ಶನ್‌ ಸೇರಿದಂತೆ  ನಾಲ್ಕು ಮಂದಿಯನ್ನು ಆರೋಪಿಗಳ ವಿಚಾರಣೆ ಅಗತ್ಯವಿರುವುದರಿಂದ ಎರಡು ದಿನ ಮತ್ತೆ ಪೊಲೀಸ್‌ ಕಸ್ಟಡಿಗೆ ನೀಡಲಾಗಿದೆ. ಪ್ರಕರಣದ ಎ1 ಆರೋಪಿ ನಟಿ ಪವಿತ್ರಗೌಡಗೆ ನ್ಯಾಯಾಂಗ ಬಂಧನ ವಿಧಿಸಲಾಗಿರುವುದರಿಂದ ಪವಿತ್ರ ಪರಪ್ಪನ ಅಗ್ರಹಾರ ಸೇರಲಿದ್ದಾರೆ.

ಆರೋಪಿಗಳಾದ ವಿನಯ್‌,ಪ್ರದೋಷ್‌ಮತ್ತು ಧನರಾಜ್‌ ಪೊಲೀಸ್‌ ಕಸ್ಟಡಿಯಲ್ಲಿ ದರ್ಶನ್‌ನೊಂದಿಗೆ ವಿಚಾರಣೆ ಎದುರಿಸಲಿದ್ದಾರೆ. ಉಳಿದ ಆರೋಪಿಗಳು ಪವಿತ್ರಗೌಡ ಜೊತೆ ಜೈಲು ಪಾಲಾಗಿದ್ದಾರೆ.

 

 

Tags:
error: Content is protected !!