Mysore
25
overcast clouds
Light
Dark

ಸಿಎಂ ಸಿದ್ದರಾಮಯ್ಯರನ್ನ ಸೋಮಾರಿ ಸಿದ್ದು ಎಂದ ನಟ ಚೇತನ್‌ ಅಹಿಂಸಾ.!

ಬೆಂಗಳೂರು: ಪ್ರಸಕ್ತ ಸಾಲಿನ ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ಟಾಪರ್‌ಗಳಿಗೆ ಬಾಬಾಸಾಹೇಬ್ ಅವರ ‘ಅನೀಹಿಲೇಷನ್ ಆಫ್ ಕಾಸ್ಟ್’ ಕೃತಿಯ ಪ್ರತಿಯನ್ನು ಉಡುಗೊರೆಯಾಗಿ ನೀಡಿರುವುದಕ್ಕೆ ನಟ ಚೇತನ್‌ ಅಹಿಂಸಾ ಸಾಮಾಜಿಕ ಜಾಲತಾಣದಲ್ಲಿ ವ್ಯಂಗ್ಯವಾಡಿದ್ದಾರೆ.

ಈ ಬಗ್ಗೆ ತಮ್ಮ ಎಕ್ಸ್‌ ಖಾತೆಯ ಮೂಲಕ ನಟ ಚೇತನ್‌ ಅಹಿಂಸಾ ಅವರು, ಸೋಮಾರಿ ಸಿಎಂ ಸಿದ್ದು ಅವರು ಟಾಪರ್‌ ಗಳಿಗೆ ಬಾಬಾಸಾಹೇಬ್ ಅವರ ‘ಅನೀಹಿಲೇಷನ್ ಆಫ್ ಕಾಸ್ಟ್’ ಕೃತಿ ನೀಡಿರುವುದು ಎಷ್ಟು ಸರಿ ಎಂದು ಟೀಕಿಸಿದ್ದಾರೆ.

ಎಷ್ಟು ವಿಪರ್ಯಾಸ. ಅಂಬೇಡ್ಕರ್ ಅವರ ಕಾಲದಲ್ಲಿ ಅವರ ಅತಿದೊಡ್ಡ ರಾಜಕೀಯ ಶತ್ರು ಕಾಂಗ್ರೆಸ್ ಪಕ್ಷ (ರಾಜಕೀಯ ಹಿಂದೂ ಧರ್ಮ); ಇಂದಿನ ಕಾಂಗ್ರೆಸ್ ಪಕ್ಷ (ಅದೇ ಮನುವಾದ) ಅಂಬೇಡ್ಕರ್ ಅವರನ್ನು ಚುನಾವಣಾ ಲಾಭಕ್ಕಾಗಿ ಅಪಹರಿಸಲು ಪ್ರಯತ್ನಿಸುತ್ತಾರೆ. ಗಾಂಧಿಯವರ 36 ಬ್ರಾಹ್ಮಣ್ಯದ ಪುಸ್ತಕಗಳಲ್ಲಿ ಒಂದನ್ನು ಸಿಎಂ ಈ ಇಬ್ಬರು ವಿದ್ಯಾರ್ಥಿಗಳಿಗೆ ನೀಡಬೇಕಿತ್ತು; ಇದು ಸೈದ್ಧಾಂತಿಕವಾಗಿ ಹೆಚ್ಚು ಪ್ರಾಮಾಣಿಕವಾದ ಉಡುಗೊರೆಯಾಗಿರುತ್ತಿತ್ತು ಎಂದು ತಮ್ಮ ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ.