Mysore
30
scattered clouds

Social Media

ಶುಕ್ರವಾರ, 27 ಫೆಬ್ರವರಿ 2026
Light
Dark

ಕತ್ತಿ ಹಿಡಿದು ನಿಂತ ಕಂದಾಯ ಸಚಿವ

ಹಾವೇರಿ : ಕಂದಾಯ ಸಚಿವ ಕೃಷ್ಣ ಬೈರೇಗೌಡ ಪ್ರಗತಿ ಪರಿಶೀಲನಾ ಸಭೆಗಳಲ್ಲಿ ನಿರಂತರವಾಗಿ ಭಾಗಿಯಾಗುತ್ತಿದ್ದು, ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನಲ್ಲಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ತಾಲೂಕು ಕಚೇರಿಯಲ್ಲಿ ಕಣ್ಣಿಗೆ ಬಿದ್ದ ಪುರಾತನ ಕತ್ತಿ ಹಿಡಿದು ಫೋಟೋಗೆ ಪೋಸ್ ಕೊಟ್ಟಿದ್ದಾರೆ.

ಗದಗದಲ್ಲಿ ನಡೆಯುತ್ತಿರುವ ಕನ್ನಡ ಸಂಭ್ರಮ ಕಾರ್ಯಕ್ರಮ ಹಿನ್ನೆಲೆ ತೆರಳಿದ್ದ ಅವರು, ಹಾವೇರಿಯ ರಾಣೆಬೆನ್ನೂರಿನ ಕಂದಾಯ ಇಲಾಖೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಅಲ್ಲಿದ್ದ ಪುರಾತನ ಕಾಲ ಕತ್ತಿ ನೋಡಿ ಆಶ್ಚರ್ಯಗೊಂಡ ಅವರು, ಕತ್ತಿ ಹಿಡಿದು ಪೋಸ್ ಕೊಟ್ಟಿದ್ದಾರೆ.

ಈ ಕುರಿತು ಇನ್ಸ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ರಾಣೆಬೆನ್ನೂರು ತಾಲೂಕು ಕಚೇರಿಯ ರೆಕಾರ್ಡ್ ರೂಂಗೆ ಭೇಟಿ ನೀಡಿದಾಗ ಅಪರೂಪದ ಸಂಗತಿಗಳು ಕಾಣಸಿಕ್ಕವು. 1842 ನೇ ಇಸವಿಯ ಮೂಲ ಭೂ ಸರ್ವೇ ರೇಖಾಚಿತ್ರ, ಭೂಕಂದಾಯ ಸಂಗ್ರಹಿಸಲು ಅಧಿಕಾರಿಗಳು ಬಳಸುತ್ತಿದ್ದ ಶತಮಾನದ ಕತ್ತಿ ಇಲ್ಲಿವೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!