ತುಮಕೂರು: ಕಾಂಗ್ರೆಸ್ ಜೊತೆಗೆ ಬಿಜೆಪಿ ಪಕ್ಷದಲ್ಲೂ ನವೆಂಬರ್ ಕ್ರಾಂತಿ ಆಗೋದು ಪಕ್ಕಾ ಎಂದು ಮಾಜಿ ಸಚಿವ ಕೆ.ಎನ್.ರಾಜಣ್ಣ ಭವಿಷ್ಯ ನುಡಿದಿದ್ದಾರೆ.
ಈ ಕುರಿತು ತುಮಕೂರಿನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಹಾರ ಚುನಾವಣೆ ಬಳಿಕ ಸಂಪುಟ ವಿಸ್ತರಣೆಯಾಗುತ್ತದೆ. ನಾನು ಕಹಿ ಹಾಗೂ ಸಿಹಿ ಎರಡನ್ನೂ ಸ್ವೀಕರಿಸುತ್ತೇವೆ ಎಂದು ಹೇಳಿದರು.
ಇದನ್ನೂ ಓದಿ:-ರಂಗೇರಿದ ಬಿಹಾರ ವಿಧಾನಸಭಾ ಕಣ: ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ
ಇನ್ನು ಮುಂದುವರಿದು ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ಜೊತೆಗೆ ಬಿಜೆಪಿಯಲ್ಲೂ ನವೆಂಬರ್‌ನಲ್ಲಿ ಕ್ರಾಂತಿ ಆಗಲಿದೆ. ಬಿಜೆಪಿ ರಾಜ್ಯಾಧ್ಯಕ್ಷರಾಗಿರುವ ವಿಜಯೇಂದ್ರ ಅವರನ್ನು ತೆಗೆಯಲು ದೊಡ್ಡ ಗುಂಪೊಂದು ಕಾದು ಕುಳಿತಿದೆ. ವಿಜಯೇಂದ್ರರನ್ನು ಅಧ್ಯಕ್ಷ ಸ್ಥಾನದಿಂದ ತೆಗೆದರೆ ಯಡಿಯೂರಪ್ಪ ಸುಮ್ಮನೆ ಇರಲ್ಲ ಎಂದರು.
ಇನ್ನು 1972ರಲ್ಲಿ ಡಿ.ದೇವರಾಜ ಅರಸು ಅವರು ಶಾಸಕರಲ್ಲದಿದ್ದರೂ ಸಿಎಂ ಆಗಿದ್ದರು. ಇದಕ್ಕೆಲ್ಲಾ ಅಂದಿನ ಶಾಸಕರ ಅಭಿಪ್ರಾಯವೇ ಕಾರಣವಾಗಿತ್ತು. ಸಿದ್ದರಾಮಯ್ಯ ಒಬ್ಬ ಎಲೆಕ್ಟೆಡ್ ಮುಖ್ಯಮಂತ್ರಿ. ಮುಂದೆ ಏನಾದರೂ ಸಿಎಂ ಬದಲಿಸಬೇಕಾದರೆ ವೀಕ್ಷಕರನ್ನು ಕಳುಹಿಸಿ ಎಐಸಿಸಿ ಅಭಿಪ್ರಾಯ ಸಂಗ್ರಹಿಸುತ್ತದೆ. ಈ ಎಲ್ಲಾ ಗೊಂದಲಕ್ಕೆ ಹೈಕಮಾಂಡ್ ತೆರೆ ಎಳೆಯಬೇಕು ಎಂದು ಆಗ್ರಹಿಸಿದರು.





