Ashburn
88
broken clouds
Light
Dark

ಲೋಕಸಮರ 2024: 58 ಕ್ಷೇತ್ರಗಳಿಗಿಂದು ಆರನೇ ಹಂತದ ಮತದಾನ

ನವದೆಹಲಿ: ದೇಶಾದ್ಯಂತ ಒಟ್ಟು 7 ಹಂತಗಳಲ್ಲಿ ಲೋಕಸಭಾ ಚುನಾವಣೆ ನಡೆಯುತ್ತಿದ್ದು, ಇಂದು ದೇಶಾದ್ಯಂತ 6ನೇ ಹಂತದ ಮತದಾನ ನಡೆಯುತ್ತಿದೆ. 8 ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳು ಸೇರಿದಂತೆ ಒಟ್ಟು 58 ಕ್ಷೇತ್ರಗಳಿಗೆ ಇಂದು ಮತದಾನ ನಡೆಯುತ್ತಿದೆ.

ಈಗಾಗಲೇ ಮತದಾನ ಆರಂಭವಾಗಿದ್ದು, ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ. ಇಂದು ಬೆಳ್ಳಿಗೆ 7ಗಂಟೆಯಿಂದ ಸಂಜೆ 6 ವರೆಗೆ ಮತದಾನ ನಡೆಯಲಿದೆ.

ಇನ್ನು 58 ಕ್ಷೇತ್ರಗಳ ಪೈಕಿ ಬಿಹಾರದ 8, ಹರ್ಯಾಣದ ಎಲ್ಲಾ 10 ಕ್ಷೇತ್ರಗಳು, ಜಮ್ಮು ಕಾಶ್ಮೀರಾದ 1, ಜಾರ್ಖಂಡ್‌ 4, ದೆಹಲಿಯ ಎಲ್ಲಾ 7 ಕ್ಷೇತ್ರಗಳು, ಒಡಿಶಾದ 6, ಉತ್ತರ ಪ್ರದೇಶದ 14 ಹಾಗೂ ಪಶ್ಚಿಮ ಬಂಗಾಳದ 8 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಇನ್ನು ಈ ಅಖಾಡದಲ್ಲಿ ಒಟ್ಟು 889 ಅಭ್ಯರ್ಥಿಗಳಿದ್ದಾರೆ.