Mysore
26
broken clouds
Light
Dark

ಪೆನ್‌ಡ್ರೈವ್‌ ಪ್ರಕರಣ: ಎಸ್‌ಐಟಿ ಸಹಾಯವಾಣಿಯಲ್ಲಿ ದಾಖಲಾಯ್ತು 30ಕ್ಕೂ ಹಚ್ಚು ಕರೆಗಳು

ಹಾಸನ: ಸಂಸದ ಪ್ರಜ್ವಲ್‌ ರೇವಣ್ಣ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ (ರಾಜ್ಯ ತನಿಖಾ ದಳ) ಸಹಾಯವಾಣಿ ನೇಮಿಸಿದ್ದು, ಅದರಲ್ಲಿ ಇಂದು (ಮೇ.೨೪) ದಾಖಲೆಯ ಕರೆಗಳು ದಾಖಲಾಗಿವೆ.

ಹೌದು, ಪೆನ್‌ಡ್ರೈವ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ಸಹಾಯವಾಣಿಗೆ ಇಂದು ಒಂದೇ ದಿನದಲ್ಲಿ 30ಕ್ಕೂ ಹೆಚ್ಚು ಕರೆಗಳು ದಾಖಲಾಗಿವೆ. ಅಶ್ಲೀಲ ವೀಡಿಯೋಗಳ ಪೆನ್ಡ್ರೈವ್‌ನಲ್ಲಿರುವ ಮಹಳಾ ಸಂತ್ರಸ್ತೆಯರು ಈ ಕರೆಗಳನ್ನು ಮಾಡಿದ್ದಾರೆ ಎನ್ನಲಾಗಿದೆ.

ಆದರೆ ಇದುವರೆಗೂ ಯಾವುದೇ ಸಂತ್ರಸ್ತೆಯರು ದೂರು ನೀಡಲು ಮುಂದಾಗಿಲ್ಲ. ಈವರೆಗೆ ಕರೆ ಮಾಡಿರುವ ಸಂತ್ರಸ್ತೆಯರು ತಮ್ಮ ಮೇಲಿನ ದೌರ್ಜನ್ಯಗಳ ಬಗ್ಗೆ ವಿವರಿಸಿದ್ದಾರೆ. ಆದರೆ ಈವರೆಗೆ ಯಾರು ದೂರನ್ನು ನೋಂದಾಯಿಸಿಲ್ಲ.

ಹೆಲ್ಪ್‌ಲೈನ್‌ಗೆ ನೀವು ನಿಮ್ಮ ವಿಳಾಸ ಹೇಳಿದರೇ ನಾವೇ ಖುದ್ದು ಬಂದು ನಿಮ್ಮ ಬಳಿ ದೂರುಗಳನ್ನು ದಾಖಲಿಸುತ್ತೇವೆ. ನಿಮ್ಮ ಗುರುತು ಮತ್ತು ವಿಳಾಸವನ್ನು ನಾವು ಯಾರಿಗೂ ತಿಳಿಸುವುದಿಲ್ಲ. ಎಲ್ಲಾ ವಿಚಾರದಲ್ಲಿಯೂ ಗೌಪ್ಯತೆಯನ್ನು ಕಾಪಾಡಲಾಗುವುದು ಎಂದು ಎಸ್‌ಐಟಿ ಸಹಾಯವಾಣಿ ಹೇಳಿದೆ.